ಕೋಲ್ಕತ್ತ: ಟಿಎಂಸಿ ಪಕ್ಷದ ಮಾಜಿ ನಾಯಕ ಶೇಖ್ ಶಹಜಹಾನ್ ಅವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದಕ್ಕೆ ಸಂಬಂಧಿಸಿ ಸಿಬಿಐ ತಂಡವು ಭಾನುವಾರ ಸಂದೇಶ್‌ಖಾಲಿಗೆ ಭೇಟಿ ನೀಡಿ ದೂರುದಾರ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡಿತು.
‘ಬಹಳ ಹಿಂದೆಯೇ ನಾನು ದೂರು ನೀಡಿದ್ದೆ. ತನಿಖಾ ಸಂಸ್ಥೆಗೆ ನಾನು ಖಾಸಗಿಯಾಗಿ ಹೇಳಿಕೆ ನೀಡಿದ್ದೇನೆ. ಶಹಜಹಾನ್ ಅವರಿಗೆ ಮರಣದಂಡನೆ ಶಿಕ್ಷೆಯಾಗಬೇಕು. ಆತ ಜೈಲಿನಲ್ಲಿ ಇರುವ ಕಾರಣ ಸಂದೇಶ್‌ಖಾಲಿಯ ಮಹಿಳೆಯರು ಸುರಕ್ಷಿತವಾಗಿ ಇದ್ದಾರೆ. ಆತ ಹೊರಬಂದ ಕೂಡಲೇ ನಮ್ಮನ್ನು ಹಿಂಸಿಸಲು ಆರಂಭಿಸುತ್ತಾನೆ ಎಂದು ಚೆನ್ನಾಗಿ ತಿಳಿದಿದೆ’ ಎಂದು ಮಹಿಳೆ ಪ್ರತಿಕ್ರಿಯಿಸಿದರು.
‘ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಅವರು ನೀಡಿದ ಹೇಳಿಕೆಯ ವಿಚಾರಗಳನ್ನು ಬಹಿರಂಗಪಡಿಸುವುದಿಲ್ಲ. ಅವರ ಹೇಳಿಕೆಯಲ್ಲಿನ ವಿಚಾರಗಳ ಕುರಿತು ತನಿಖೆ ನಡೆಸುತ್ತೇವೆ’ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.