ADVERTISEMENT

ಸಿಬಿಎಸ್‌ಇ ಮೌಲ್ಯಮಾಪನ ಯೋಜನೆ : ಸುಪ್ರೀಂ ಆದೇಶವೇ ಅಂತಿಮ

ಪಿಟಿಐ
Published 6 ಡಿಸೆಂಬರ್ 2021, 16:46 IST
Last Updated 6 ಡಿಸೆಂಬರ್ 2021, 16:46 IST
.
.   

ನವದೆಹಲಿ: ಸಿಬಿಎಸ್‌ಇ 12ನೇ ತರಗತಿಯ ಅಂಕಗಳ ಮೌಲ್ಯಮಾಪನಕ್ಕಾಗಿ ನಿರ್ಧರಿಸುವ ಯೋಜನೆ ವಿಚಾರದಲ್ಲಿ ತಾನು ಈಗಾಗಲೇ ನೀಡಿರುವ ಆದೇಶವೇ ಅಂತಿಮವಾಗಿದ್ದು, ಅದನ್ನು ಮತ್ತೆ ಮರುಪರಿಶೀಲಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

‘ಮೌಲ್ಯಮಾಪನ ನಿರ್ಧರಿಸುವ ಸೂತ್ರಕ್ಕೆ ನಾವು ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದೆ. ಅದನ್ನು ಪ್ರಶ್ನಿಸುವಂತಿಲ್ಲ’ ಎಂದು ನ್ಯಾಯಮುರ್ತಿಗಳಾದ ಎ.ಎಂ.ಖಾನ್ವಿಲ್ಕರ್‌ ಮತ್ತು ಸಿ.ಟಿ.ರವಿಕುಮಾರ್‌ ಅವರಿದ್ದ ಪೀಠ ಹೇಳಿತು.

ಕಳೆದ ವರ್ಷ ಕೋವಿಡ್ ಕಾರಣ ವಾರ್ಷಿಕ ಪರೀಕ್ಷೆ ನಡೆಸಿರಲಿಲ್ಲ. 10ನೇ ತರಗತಿಯ ಶೇ 30ರಷ್ಟು ಅಂಕ, 11ನೇ ತರಗತಿಯ ಶೇ 30ರಷ್ಟು ಅಂಕ ಹಾಗೂ 12ನೇ ತರಗತಿಯಲ್ಲಿ ಘಟಕ, ಮಧ್ಯಾವಧಿ ಮತ್ತು ಪೂರ್ವಸಿದ್ಧತಾ ಪರೀಕ್ಷೆಗಳ ಶೇ 40ರಷ್ಟು ಅಂಕಗಳನ್ನು ಆಧರಿಸಿ ಫಲಿತಾಂಶ ನಿರ್ಧರಿಸಬಹುದು ಎಂದು ತೀರ್ಪು ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಈ ಸ್ಪಷ್ಟನೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.