ADVERTISEMENT

ದೆಹಲಿ: ಆರ್ಥಿಕ ದುರ್ಬಲರಿಗೆ 3,024 ಮನೆ–ಪ್ರಧಾನಿ ಹಸ್ತಾಂತರ

ಪಿಟಿಐ
Published 2 ನವೆಂಬರ್ 2022, 19:46 IST
Last Updated 2 ನವೆಂಬರ್ 2022, 19:46 IST
   

ನವದೆಹಲಿ: ರಾಷ್ಟ್ರ ರಾಜಧಾನಿ ಅಭಿವೃದ್ಧಿಗೆ ಕೈಗೊಂಡಿರುವ ಸರ್ಕಾರದ ಕ್ರಮಗಳನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಎಎಪಿ ಸರ್ಕಾರವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಕೇಂದ್ರದ ಈ ಕ್ರಮಗಳ ಜಾಹೀರಾತಿಗೆ ಎಷ್ಟು ಹಣ ಖರ್ಚು ಮಾಡಬೇಕಾಗಿತ್ತು ಎಂದು ಆಶ್ಚರ್ಯಪಟ್ಟರು.

ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 3,024 ಹೊಸ ಫ್ಲ್ಯಾಟ್ ಗಳನ್ನು ಉದ್ಘಾಟಿಸಿದ ಮೋದಿ, ಬಡತನವನ್ನು ಬಡವರು ನಿಭಾಯಿಸಬೇಕಾದ ಸಮಸ್ಯೆ ಎಂದು ಬಹಳ ಹಿಂದೆಯೇ ಪರಿಗಣಿಸಲಾಗಿತ್ತು. ಆದರೆ, ಅವರು ಈಗ ಸರ್ಕಾರದ ನೀತಿಗಳ ಕೇಂದ್ರ ಬಿಂದುವಾಗಿದ್ದಾರೆ.ಏಕೆಂದರೆ ಅವರದು ‘ಗರೀಬೋನ್ ಕಿ ಸರ್ಕಾರ್’ (ಬಡ ಜನರ ಸರ್ಕಾರ) ಎಂದು ಮೋದಿ ಹೇಳಿದರು.

ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜಧಾನಿಯಲ್ಲಿ 190 ಕಿ.ಮೀ.ನಿಂದ 400 ಕಿ.ಮೀ.ಗೆ ಮೆಟ್ರೋ ಸೇವೆ ವಿಸ್ತರಿಸಿರುವುದನ್ನು ಅವರು ಉಲ್ಲೇಖಿಸಿದರು.ರಾಜಧಾನಿ ಸುತ್ತಮುತ್ತಲ ಹೆದ್ದಾರಿಗಳ ಕಾಮಗಾರಿ ಮತ್ತು ಬಡವರ ಪರ ನಿರ್ಧಾರಗಳಲ್ಲದೆ ಇತರೆ ಮೂಲಸೌಕರ್ಯ ಕ್ರಮಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ADVERTISEMENT

ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ದೆಹಲಿಯನ್ನು ಭವ್ಯ ನಗರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದು ಮೋದಿ ಹೇಳಿದರು.

‘ನಿಮ್ಮ ಮುಂದೆ ಪಟ್ಟಿ ಮಾಡಿದ ಎಲ್ಲಾ ವಿಷಯಗಳಿಗೆ ಎಷ್ಟು ಹಣವನ್ನು ಜಾಹೀರಾತಿಗಾಗಿ ಖರ್ಚು ಮಾಡಬೇಕಿತ್ತು. ನನ್ನ ಭಾವಚಿತ್ರಗಳೊಂದಿಗೆ ಎಷ್ಟು ದಿನಪತ್ರಿಕೆ ಪುಟಗಳನ್ನು (ಜಾಹೀರಾತುಗಳಿಂದ) ತುಂಬಬೇಕಾಗಿತ್ತು?’ ಎಂದುಫಲಾನುಭವಿಗಳನ್ನು ಮೋದಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.