ADVERTISEMENT

ತ್ರಿ‍ಪುರಾ: ಗೋಮತಿ ನದಿ ಹೂಳೆತ್ತಲು ₹ 24 ಕೋಟಿ ಮಂಜೂರು

ಭಾರತ–ಬಾಂಗ್ಲಾದೇಶ ಜಲಮಾರ್ಗ ಯೋಜನೆಗೆ ಉತ್ತೇಜನ ಉದ್ದೇಶ

ಪಿಟಿಐ
Published 13 ಫೆಬ್ರುವರಿ 2022, 12:35 IST
Last Updated 13 ಫೆಬ್ರುವರಿ 2022, 12:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಗರ್ತಲಾ: ಭಾರತ ಹಾಗೂ ಬಾಂಗ್ಲಾದೇಶ ನಡುವೆ ಹರಿಯುವ ಗೋಮತಿ ನದಿಯಲ್ಲಿ ಹೂಳೆತ್ತುವ ಕಾಮಗಾರಿಗಾಗಿ ಕೇಂದ್ರ ಸರ್ಕಾರ ₹ 24 ಕೋಟಿ ಮಂಜೂರು ಮಾಡಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ಭಾರತ–ಬಾಂಗ್ಲಾದೇಶ ನಡುವಿನ ಉದ್ದೇಶಿತ ಜಲಮಾರ್ಗ ಯೋಜನೆಗೆ ಇದರಿಂದ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತ್ರಿಪುರಾದ ಸೆಪಾಹಿಜಾಲಾ ಜಿಲ್ಲೆಯ ಸೋನಾಮುರದಿಂದ ನೆರೆಯ ಬಾಂಗ್ಲಾದೇಶದ ದೌಡ್‌ಕಂಡಿ ವರೆಗಿನ 93 ಕಿ.ಮೀ. ಉದ್ದದ ಉದ್ದೇಶಿತ ಜಲಮಾರ್ಗವನ್ನು ಈ ಯೋಜನೆ ಒಳಗೊಂಡಿದೆ. ಈ ಪೈಕಿ 15.5 ಕಿ.ಮೀ. ಉದ್ದದ ಮಾರ್ಗದಲ್ಲಿನ ಹೂಳನ್ನು ಎತ್ತಿದರೆ, ಜಲಮಾರ್ಗ ಬಳಕೆಗೆ ಮುಕ್ತವಾಗಲಿದೆ ಎಂದು ತ್ರಿಪುರಾದ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಡರ್ಲೋಂಗ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.