ADVERTISEMENT

ತ್ಯಾಜ್ಯ ವಿಲೇವಾರಿಯಿಂದ ಕೇಂದ್ರಕ್ಕೆ ₹250 ಕೋಟಿ ಆದಾಯ ನಿರೀಕ್ಷೆ

ಸರಳ ಜೀವನಕ್ಕಾಗಿ 500 ನಿಯಮಗಳನ್ನು ಸರಳಗೊಳಿಸಿದ ಸರ್ಕಾರ

ಪಿಟಿಐ
Published 21 ಅಕ್ಟೋಬರ್ 2022, 12:26 IST
Last Updated 21 ಅಕ್ಟೋಬರ್ 2022, 12:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ:ವಿಶೇಷ ಸ್ವಚ್ಛ ಅಭಿಯಾನದಡಿ ತ್ಯಾಜ್ಯ ವಿಲೇವಾರಿ ಮೂಲಕಕೇಂದ್ರ ಸರ್ಕಾರ ₹250 ಕೋಟಿಗೂ ಅಧಿಕ ಆದಾಯ ಗಳಿಸಲಿದೆ. ಜೊತೆಗೆ ಸರಳ ಜೀವನಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಂದಾಜು 500 ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸಿದೆ ಎಂದು ಹಿರಿಯ ಅಧಿಕಾರಿ ವಿ.ಶ್ರೀನಿವಾಸ್‌ ಶುಕ್ರವಾರ ತಿಳಿಸಿದ್ದಾರೆ.

ಸ್ವಚ್ಛ ಅಭಿಯಾನದಲ್ಲಿ ಸುಮಾರು ಮೂರು ಲಕ್ಷ ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸಲಾಗಿದೆ. ಈ ಪೈಕಿ 4,500 ಕುಂದುಕೊರತೆಗಳು ಪಿಂಚಣಿದಾರರಿಗೆ ಸಂಬಂಧಿಸಿದ್ದವು ಎಂದು ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ಕಾರ್ಯದರ್ಶಿ ಶ್ರೀನಿವಾಸ್‌ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ 61,532 ಕಚೇರಿಗಳಲ್ಲಿ ಅ.2ರಿಂದ 31ರ ವರೆಗೆ ಸ್ವಚ್ಛ ಅಭಿಯಾನ ಹಮ್ಮಿಕೊಂಡಿದ್ದು, ತ್ಯಾಜ್ಯ ವಿಲೇವಾರಿಯಿಂದ ₹252.25 ಕೋಟಿ ಆದಾಯ ಬರಲಿದೆ. ಜೊತೆಗೆ 34.69 ಲಕ್ಷ ಚದರ ಅಡಿ ಹೆಚ್ಚುವರಿ ಜಾಗ ತ್ಯಾಜ್ಯಮುಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.