ADVERTISEMENT

ಆಂಧ್ರದಲ್ಲಿ ಹೂಡಿಕೆ: ಐರೋಪ್ಯ ಒಕ್ಕೂಟದ ರಾಯಭಾರಿ ಜತೆ ನಾಯ್ಡು ಮಾತುಕತೆ

ಪಿಟಿಐ
Published 9 ಜನವರಿ 2026, 13:35 IST
Last Updated 9 ಜನವರಿ 2026, 13:35 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ಅಮರಾವತಿ: ‘ವ್ಯಾಪಾರ, ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರವೂ ಸೇರಿದಂತೆ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಭಾರತದಲ್ಲಿನ ಐರೋಪ್ಯ ಒಕ್ಕೂಟದ ರಾಯಭಾರಿ ಹರ್ವೆ ಡೆಲ್ಫಿನ್‌ ಅವರೊಂದಿಗೆ ಮಾತುಕತೆ ನಡೆಸಿದರು. 

‘ಐರೋಪ್ಯ ಒಕ್ಕೂಟ–ಭಾರತ–ಆಂಧ್ರಪ್ರದೇಶ’ ನಡುವಿನ ವ್ಯಾಪಾರ ಸಹಕಾರ, ಶುದ್ಧ ಇಂಧನ, ಮೂಲಸೌಕರ್ಯ ಮತ್ತು ಹೂಡಿಕೆ ಬಗ್ಗೆ ಮಾತುಕತೆ ನಡೆಸಿದ್ದೇನೆ.  ಕೈಗಾರಿಕಾ ಕಾರಿಡಾರ್‌ ಸ್ಥಾಪನೆ, ಬ್ಲೂ ವ್ಯಾಲಿ ಯೋಜನೆ ಒಳಗೊಂಡ ಆಂಧ್ರಪ್ರದೇಶ ಅಭಿವೃದ್ಧಿ ಮುನ್ನೋಟ–2029ರ ಬಗ್ಗೆಯೂ ಚರ್ಚಿಸಿದ್ದೇವೆ’ ಎಂದು ಅವರು ಹೇಳಿದರು.  

ಮಾತುಕತೆಯ ಬಳಿಕ ಡೆಲ್ಫಿನ್‌ ಅವರು ಚಂದ್ರಬಾಬು ನಾಯ್ಡು ಅವರೊಂದಿಗೆ ವಿಜಯವಾಡದ ಕೃಷ್ಣಾ ನದಿ ತೀರದಲ್ಲಿ ಆಯೋಜಿಸಿದ್ದ ‘ಅವಕಾಯ ಸಾಂಸ್ಕೃತಿಕ ಉತ್ಸವ’ ದಲ್ಲಿ ಭಾಗವಹಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.