ADVERTISEMENT

ಡೀಸೆಲ್‌ ಕುಡಿದು ಮಗು ಸಾವು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 16:13 IST
Last Updated 1 ಡಿಸೆಂಬರ್ 2022, 16:13 IST

ಭುವನೇಶ್ವರ: ಒಡಿಶಾದಲ್ಲಿ ಒಂದೂವರೆ ವರ್ಷದ ಮಗು ಡೀಸೆಲ್‌ ಕುಡಿದು ಮೃತಪಟ್ಟಿದೆ.

ಮನೆಯಲ್ಲಿ ಬಾಟಲಿಯಲ್ಲಿ ಇಟ್ಟಿದ್ದ ಡೀಸೆಲ್‌ ಅನ್ನು ಮಗು ನೀರೆಂದು ಭಾವಿಸಿ ಕುಡಿದು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ಮಗುವಿನ ತಂದೆ ವಾಹನಗಳ ರಿಪೇರಿ ಕೆಲಸ ಮಾಡುತ್ತಿದ್ದರು. ಕೆಲಸದ ಸಲುವಾಗಿ ಅವರು ಮನೆಗೆ ಡೀಸೆಲ್‌ ತಂದಿದ್ದರು.

ADVERTISEMENT

ಮನೆಯವರ ಗಮನಕ್ಕೆ ಬಾರದಂತೆ ಮಗು ಡೀಸೆಲ್‌ ಕುಡಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.