ADVERTISEMENT

2023ರಲ್ಲಿ ಬಾಲ್ಯ ವಿವಾಹ 6 ಪಟ್ಟು ಹೆಚ್ಚಳ: 17,000 ಬಾಲಕಿಯರ ಅಪಹರಣ; NCRB

ಪಿಟಿಐ
Published 3 ಅಕ್ಟೋಬರ್ 2025, 11:05 IST
Last Updated 3 ಅಕ್ಟೋಬರ್ 2025, 11:05 IST
<div class="paragraphs"><p>ಡೆಕ್ಕನ್ ಹೆರಾಲ್ಡ್ ಚಿತ್ರ</p></div>

ಡೆಕ್ಕನ್ ಹೆರಾಲ್ಡ್ ಚಿತ್ರ

   

ತೇಜುದ್ದೀನ್ ಆಜಾದ್

ನವದೆಹಲಿ: 2023ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಆರು ಪಟ್ಟು ಹೆಚ್ಚಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಇತ್ತೀಚಿನ ದತ್ತಾಂಶದ ಪ್ರಕಾರ, ಒಟ್ಟು ಪ್ರಕರಣಗಳ ಪೈಕಿ ಅಸ್ಸಾಂನಲ್ಲೇ ಸುಮಾರು ಶೇ 90ರಷ್ಟು ಪ್ರಕರಣ ದಾಖಲಾಗಿವೆ.

ADVERTISEMENT

2023ರಲ್ಲಿ 16,737 ಬಾಲಕಿಯರು ಮತ್ತು 129 ಬಾಲಕರನ್ನು ಮದುವೆಗಾಗಿ ಅಪಹರಿಸಲಾಗಿದೆ ಎಂದು ಎನ್‌ಸಿಆರ್‌ಬಿ ದತ್ತಾಂಶವು ಬಹಿರಂಗಪಡಿಸಿದೆ.

2023ರಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆಯಡಿಯಲ್ಲಿ 6,038 ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ. 2022ರಲ್ಲಿ 1,002 ಪ್ರಕರಣಗಳು ಮತ್ತು 2021ರಲ್ಲಿ 1,050 ಪ್ರಕರಣಗಳು ದಾಖಲಾಗಿದ್ದವು.

ಈ ಪೈಕಿ ಅಸ್ಸಾಂನಲ್ಲಿ 5,267 ಪ್ರಕರಣಗಳು ವರದಿಯಾಗಿವೆ. ಇದು ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ ತಮಿಳುನಾಡು (174), ಕರ್ನಾಟಕ (145) ಮತ್ತು ಪಶ್ಚಿಮ ಬಂಗಾಳ (118) ನಂತರದ ಸ್ಥಾನದಲ್ಲಿವೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಛತ್ತೀಸಗಢ, ನಾಗಲ್ಯಾಂಡ್, ಲಕ್ಷದ್ವೀಪ ಮತ್ತು ಲಡಾಕ್‌ಗಳಲ್ಲಿ 2023ರಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

18 ವರ್ಷದೊಳಗಿನ ಬಾಲಕಿಯರು ಮತ್ತು 21 ವರ್ಷದೊಳಗಿನ ಬಾಲಕರ ವಿವಾಹ ತಡೆ ದೃಷ್ಟಿಯಿಂದ 2006ರಲ್ಲಿ ಈ ಕಾಯ್ದೆ ಜಾರಿಗೆ ತರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.