ADVERTISEMENT

ಚೀನಾದಲ್ಲಿ ಕೋವಿಡ್ ಹೆಚ್ಚಳ: ತುಂಬಿದ ಸ್ಮಶಾನಗಳು, ಸಿಬ್ಬಂದಿ ಹೈರಾಣ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 17:06 IST
Last Updated 20 ಡಿಸೆಂಬರ್ 2022, 17:06 IST
   

ಬೀಜಿಂಗ್: ಕೋವಿಡ್ ತೀವ್ರಗೊಂಡಿರುವ ಚೀನಾದಲ್ಲಿ ಚಿತಾಗಾರಗಳಿಗೆ ಬರುತ್ತಿರುವ ಮೃತದೇಹಗಳ ಸಂಖ್ಯೆಯೂ ಹೆಚ್ಚಿದ್ದು, ಅಲ್ಲಿನ ಸಿಬ್ಬಂದಿ ಹೈರಾಣಾಗಿದ್ದಾರೆ.

ಚೀನಾದಲ್ಲಿ ಮೂರು ವರ್ಷಗಳಿಂದ ಜಾರಿಯಲ್ಲಿದ್ದ ಕೋವಿಡ್ ಲಾಕ್‌ಡೌನ್, ಪ್ರತ್ಯೇಕ ವಾಸ ಮತ್ತು ಸಾಮೂಹಿಕ ಪರೀಕ್ಷೆ ನಿಯಮಾವಳಿಗಳನ್ನು ಕಳೆದ ತಿಂಗಳಷ್ಟೇ ಹಿಂಪಡೆಯಲಾಗಿತ್ತು ಆ ಬಳಿಕ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿಹೋಗಿವೆ. ಫಾರ್ಮಸಿಗಳಲ್ಲಿ ಔಷಧಿಗಳ ಕೊರತೆ ಉಂಟಾಗಿದೆ.

3 ಕೋಟಿ ಜನಸಂಖ್ಯೆ ಇರುವ ಚೊಂಕಿಂಗ್ ನಗರದಲ್ಲಿ ಸಾಧಾರಣ ಕೋವಿಡ್ ರೋಗಲಕ್ಷಣಗಳಿರುವ ಜನರಿಗೆ ಕೆಲಸಕ್ಕೆ ಹೋಗುವಂತೆ ಅಲ್ಲಿನ ಆಡಳಿತ ಮಂಡಳಿ ಸೂಚಿಸಿದೆ. ಈ ಮಧ್ಯೆ, ಅಲ್ಲಿ ಕೋವಿಡ್ ಸಂಖ್ಯೆ ಹೆಚ್ಚಿದ್ದು, ಸಾವಿನ ಸಂಖ್ಯೆ ಸಹ ಹೆಚ್ಚಿದೆ. ಮೃತದೇಹಗಳನ್ನು ಇರಿಸಿಕೊಳ್ಳಲು ಸ್ಥಳದ ಕೊರತೆ ಉಂಟಾಗಿದೆ ಎಂದು ನಗರದ ಒಂದು ಚಿತಾಗಾರ ಹೇಳಿದೆ.

ADVERTISEMENT

‘ಈ ಹಿಂದಿನ ಸನ್ನಿವೇಶಕ್ಕೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಋತದೇಹಗಳ ಸಂಖ್ಯೆ ಹೆಚ್ಚಿದೆ’ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

‘ನಾವು ತುಂಬಾ ಬ್ಯುಸಿಯಾಗಿದ್ದೇವೆ. ಮೃತದೇಹಗಳನ್ನು ಇಡುವ ಕೋಲ್ಡ್ ಸ್ಟೋರೇಜ್ ತುಂಬಿದೆ’ಎಂದು ಅವರು ತಿಳಿಸಿದ್ದಾರೆ.

ಗುವಾಂಗ್‌ಝೋ ಪ್ರದೇಶದ ಝೆಂಗ್‌ಷೆಂಗ್ ಜಿಲ್ಲೆಯ ಸ್ಮಶಾನವೊಂದಕ್ಕೆ ದಿನಕ್ಕೆ 30ಕ್ಕೂ ಅಧಿಕ ಮೃತದೇಹಗಳು ಬರುತ್ತಿವೆ ಎಂದು ಅಲ್ಲಿನ ಸಿಬ್ಬಂದಿ ಎಎಫ್‌ಪಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.