ADVERTISEMENT

ಐತಿಹಾಸಿಕ ಪ್ರಮಾದ ಸರಿ ಪಡಿಸುವುದಕ್ಕಾಗಿ ಪೌರತ್ವ ಮಸೂದೆ: ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 15:04 IST
Last Updated 11 ಡಿಸೆಂಬರ್ 2019, 15:04 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ:ಪೌರತ್ವ (ತಿದ್ದುಪಡಿ) ಮಸೂದೆಯುಐತಿಹಾಸಿಕ ಪ್ರಮಾದವನ್ನು ಸರಿಪಡಿಸಿದೆ ಎಂದು ಗೃಹ ಸಚಿವಅಮಿತ್ಶಾ ಹೇಳಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ವಿಪಕ್ಷಗಳು ಮಸೂದೆಯನ್ನು ವಿರೋಧಿಸಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದವು.

ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾಗಿತ್ತು ಎಂದು ನಾನು ಹೇಳಿದಾಗ ವಿಪಕ್ಷಗಳು ಅದನ್ನು ವಿರೋಧಿಸಿವೆ. 1950 ಏಪ್ರಿಲ್ 8ರ ನೆಹರು- ಲಿಯಾಖತ್ ಒಪ್ಪಂದ (ದೆಹಲಿ ಒಪ್ಪಂದ)ದಲ್ಲಿ ಹೇಳಿರುವುದನ್ನು ನಾನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಭಾರತ ಮತ್ತು ಪಾಕಿಸ್ತಾನದಲ್ಲಿ ಸಮಾನ ಹಕ್ಕುಗಳನ್ನು ನೀಡಬೇಕು. ಅವರು ಸರ್ಕಾರದ ಭಾಗವಾಗಿದ್ದು, ಅವರಿಗೆ ಅವರ ಧರ್ಮವನ್ನು ಅನುಸರಿಸುವ ಹಕ್ಕು ಇದೆ. ಧಾರ್ಮಿಕ ಅಲ್ಪ ಸಂಖ್ಯಾತರ ಬಗ್ಗೆ ಉಭಯ ದೇಶಗಳ ಪ್ರಧಾನಿ ಈ ರೀತಿ ಹೇಳಿದ್ದಾರೆ. ಹಾಗಾಗಿ ದೇಶ ವಿಭಜನೆಯಾಗಿದ್ದು ಧರ್ಮದ ಆಧಾರದಲ್ಲಿ. ಐತಿಹಾಸಿಕ ಪ್ರಮಾದವನ್ನು ಸರಿ ಪಡಿಸುವ ಉದ್ದೇಶದಿಂದಲೇ ನಾವು ಈ ಮಸೂದೆ ಸಿದ್ಧಪಡಿಸಿದ್ದೇವೆ ಎಂದಿದ್ದಾರೆ.

ನಾನು ಪಾಕಿಸ್ತಾನದ ಕಾನೂನುಗಳ ಬಗ್ಗೆ ಬಲ್ಲೆ. ಅಲ್ಲಿ ಹಲವಾರು ನಿರ್ಬಂಧಗಳಿವೆ. ಭಾರತ ತಮ್ಮ ನೀತಿಯನ್ನು ಅನುಸರಿಸಿತು. ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವರು ಭಾರತದ ಮುಖ್ಯ ನ್ಯಾಯಾಧೀಶ, ಮುಖ್ಯ ಚುನಾವಣಾ ಆಯುಕ್ತ ಆಗಿರುವುದನ್ನು ನಾವು ನೋಡಿದ್ದೇವೆ. ಆದರೆ ನಮ್ಮ ನೆರೆಯಲ್ಲಿರುವ ಮೂರು ದೇಶಗಳಲ್ಲಿ ಆ ರೀತಿ ಆಗಿದ್ದು ನೋಡಿದ್ದೀರಾ?.ಈ ಅಲ್ಪಸಂಖ್ಯಾತರು ರಕ್ಷಣೆ ಬಯಸಿ ನಮ್ಮ ದೇಶಕ್ಕೆ ಬಂದವರು. ಅವರಿಗೆ ಪೌರತ್ವ ನೀಡಬೇಡವೇಅದಕ್ಕಾಗಿ ಈ ಕಾನೂನು ಅಗತ್ಯವಿದೆ ಎಂದಿದ್ದಾರೆ.

ಮಸೂದೆ ಬಗ್ಗೆರಾಜ್ಯಸಭೆಯಲ್ಲಿ 6 ಗಂಟೆ ಚರ್ಚೆಯಾದ ನಂತರ ಗೃಹ ಸಚಿವರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದಾದ ನಂತರ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಕ್ಕಾಗಿ ಮತ ಚಲಾವಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.