ADVERTISEMENT

ಹೇಮಾ ಸಮಿತಿ | 35 ಪ್ರಕರಣಗಳೂ ಮುಕ್ತಾಯ: ಹೈಕೋರ್ಟ್‌ಗೆ ಎಸ್‌ಐಟಿ ಮಾಹಿತಿ

ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು ಕಾರಣ: ಹೈಕೋರ್ಟ್‌ಗೆ ಎಸ್‌ಐಟಿ ಮಾಹಿತಿ

ಪಿಟಿಐ
Published 25 ಜೂನ್ 2025, 15:59 IST
Last Updated 25 ಜೂನ್ 2025, 15:59 IST
<div class="paragraphs"><p>ಹೆಜ್ಜೆ ಹೆಜ್ಜೆಗೂ ಎಸ್‌ಐಟಿ ತನಿಖೆ</p></div>

ಹೆಜ್ಜೆ ಹೆಜ್ಜೆಗೂ ಎಸ್‌ಐಟಿ ತನಿಖೆ

   

ಎಐ ಚಿತ್ರ: ಕಣಕಾಲಮಠ

ಕೊಚ್ಚಿ: ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿ ಸಲ್ಲಿಸಿದ್ದ ವರದಿಯನ್ನು ಆಧರಿಸಿ ದಾಖಲಿಸಿದ್ದ ಎಲ್ಲ 35 ಪ್ರಕರಣಗಳನ್ನೂ ಮುಕ್ತಾಯಗೊಳಿಸುತ್ತಿರುವುದಾಗಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ಕೇರಳ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.

ADVERTISEMENT

ಮಲಯಾಳ ಚಿತ್ರೋದ್ಯಮದಲ್ಲಿ ಮಹಿಳೆಯರ ಶೋಷಣೆ ಕುರಿತು ದಾಖಲಾಗಿರುವ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಯಾವುದೇ ಸಂತ್ರಸ್ತೆಯರು ಮುಂದೆಬಾರದ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಎಸ್‌ಐಟಿ ಹೇಳಿದೆ.

ಹೇಮಾ ಸಮಿತಿಯ ವರದಿಯ ಆಧಾರದಲ್ಲೇ ಎಲ್ಲ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ಕೋರಿ ಹಲವು ಅರ್ಜಿಗಳು ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದವು.  ನ್ಯಾಯಮೂರ್ತಿ ಎ.ಕೆ.ಜಯಶಂಕರನ್‌ ನಂಬಿಯಾರ್‌ ಹಾಗೂ ನ್ಯಾ.ಸಿ.ಎಸ್‌ ಸುಧಾ ಅವರನ್ನೊಳಗೊಂಡ ನ್ಯಾಯಪೀಠವು ಈ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಈ ಕಾರಣ ಎಸ್‌ಐಟಿಯು ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತಿರುವ ತನ್ನ ನಿರ್ಧಾರವನ್ನು ನ್ಯಾಯಪೀಠಕ್ಕೆ ತಿಳಿಸಿದೆ.

ಈ ಕಾರಣದಿಂದ ಸದ್ಯಕ್ಕೆ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಜತೆಗೆ ಆಗಸ್ಟ್‌ ಮೊದಲ ವಾರದಲ್ಲಿ ರಾಜ್ಯ ಸರ್ಕಾರ ಸಿನಿಮಾ ಸಮ್ಮೇಳನ ನಡೆಸುತ್ತಿದ್ದು, ಆಗಸ್ಟ್‌ 13ರ ಬಳಿಕ ಈ ಅರ್ಜಿಗಳ ವಿಚಾರಣೆ ಮುಂದುವರಿಸುವುದಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.