ADVERTISEMENT

ಆ. 1ರಿಂದ ಬ್ರಿಗೇಡಿಯರ್‌ ಹಾಗೂ ಮೇಲ್ಮಟ್ಟದ ಅಧಿಕಾರಿಗಳಿಗೆ ಏಕರೂಪದ ಸಮವಸ್ತ್ರ

​ಪ್ರಜಾವಾಣಿ ವಾರ್ತೆ
Published 9 ಮೇ 2023, 11:02 IST
Last Updated 9 ಮೇ 2023, 11:02 IST
   

ನವದೆಹಲಿ (ಪಿಟಿಐ): ‘ಬ್ರಿಗೇಡಿಯರ್‌ಗಳು ಹಾಗೂ ಮೇಲ್ಮಟ್ಟದ ಅಧಿಕಾರಿಗಳಿಗೆ ಅವರು ನೇಮಕಗೊಂಡ ಕೇಡರ್‌ ಅಥವಾ ರೆಜಿಮೆಂಟ್‌ಗಳನ್ನು ಲೆಕ್ಕಿಸದೇ ಆಗಸ್ಟ್‌ 1ರಿಂದ ಏಕರೂಪದ ಸಮವಸ್ತ್ರವನ್ನು ಜಾರಿಗೊಳಿಸಲು ಸೇನೆ ನಿರ್ಧರಿಸಿದೆ’ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

‘ಇತ್ತೀಚೆಗೆ ಹಮ್ಮಿಕೊಂಡಿದ್ದ ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದವರು ನಡೆಸಿದ ವಿಸ್ತೃತ ಚರ್ಚೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.

ಹಿರಿಯ ಅಧಿಕಾರಿಗಳ ಹೆಡ್‌ಗೇರ್‌ಗಳು, ಶೋಲ್ಡರ್‌ ರ್‍ಯಾಂಕ್‌ ಬ್ಯಾಡ್ಜ್‌ಗಳು, ಗಾರ್ಗೆಟ್‌ ಪ್ಯಾಚಸ್‌, ಬೆಲ್ಟ್ ಹಾಗೂ ಬೂಟುಗಳು ಇನ್ನು ಮುಂದೆ ಒಂದೇ ರೀತಿಯಲ್ಲಿ ಇರಲಿವೆ. ಆದರೆ, ಕರ್ನಲ್‌ಗಳು ಹಾಗೂ ಕೆಳಮಟ್ಟದ ಅಧಿಕಾರಿಗಳ ಹಂತದ ಸಮವಸ್ತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದೂ ವಿವರಿಸಲಾಗಿದೆ.

ADVERTISEMENT

‘ರೆಜಿಮೆಂಟ್‌ ಮಿತಿಯನ್ನು ಮೀರಿ, ಹಿರಿಯ ನಾಯಕತ್ವದ ನಡುವೆ ಏಕರೂಪತೆಯ ಗುರುತನ್ನು ಬಲಪಡಿಸುವ ಹಾಗೂ ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಭಾರತೀಯ ಸೇನೆಯ ನ್ಯಾಯಯುತ ಹಾಗೂ ಸಮಾನತೆಯ ಸಂಸ್ಥೆಯಾಗುವಲ್ಲಿ ಈ ನಿರ್ಧಾರ ಸಹಾಯಕವಾಗುತ್ತದೆ’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.