ADVERTISEMENT

ಕಾಂಗ್ರೆಸ್‌ಗೆ ವಿರೋಧ ಪಕ್ಷ ನಾಯಕನ ಮಾನ್ಯತೆ ಕೈ ತಪ್ಪುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 24 ಮೇ 2019, 9:37 IST
Last Updated 24 ಮೇ 2019, 9:37 IST
   

ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 52 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್‌ಗೆ ಮತ್ತೊಮ್ಮೆ ವಿರೋಧ ಪಕ್ಷ ನಾಯಕನ ಮಾನ್ಯತೆ ಕೈ ತಪ್ಪುವ ಸಾಧ್ಯತೆಗಳಿವೆ.

2014ರ ಲೋಕಸಭೆ ಚುನಾವಣೆಯಲ್ಲಿ 44 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್‌ವಿರೋಧ ಪಕ್ಷ ನಾಯಕನ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು. ಈ ಬಾರಿಯೂಕಾಂಗ್ರೆಸ್‌ಗೆ2014ರ ಪರಿಸ್ಥಿತಿಯೇ ಮರುಕಳಿಸುವ ಸಾಧ್ಯತೆಗಳಿವೆ. ಇದರಿಂದಾಗಿಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟಕ್ಕೆ ಪ್ರಬಲ ವಿರೋಧ ಪಕ್ಷ ಇಲ್ಲದಂತಾಗಿದೆ.

ರಾಜಕೀಯ ಪಕ್ಷವೊಂದುಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕನ ಮಾನ್ಯತೆ ಪಡೆಯಬೇಕಾದರೆ ಒಟ್ಟು ಸ್ಥಾನಗಳ ಪೈಕಿ ಶೇ 10 ರಷ್ಟು ಸ್ಥಾನಗಳನ್ನು ಗೆದ್ದಿರಬೇಕು. ಲೋಕಸಭೆ ಒಟ್ಟಾರೆ ಸದಸ್ಯರ ಸಂಖ್ಯೆ 543 ಆಗಿದ್ದು, ವಿರೋಧ ಪಕ್ಷದ ನಾಯಕನ ಮಾನ್ಯತೆ ಪಡೆಯಲು 55 ಸದಸ್ಯರ ಅಗತ್ಯವಿದೆ.

ADVERTISEMENT

ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್‌ ವಿರೋಧ ಪಕ್ಷದ ನಾಯಕನ ಮಾನ್ಯತೆಗೆ ಆಗ್ರಹಿ­ಸಿತ್ತು. ಆದರೆ, ಸದನದ ಒಟ್ಟಾರೆ ಸಂಖ್ಯೆಯಲ್ಲಿ ಶೇ 10ರಷ್ಟು ಸದಸ್ಯರು ಇಲ್ಲವೆಂಬ ಕಾರಣಕ್ಕೆ ಸ್ಪೀಕರ್‌ ಎಲ್‌ಒಪಿ ಮಾನ್ಯತೆ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.