ADVERTISEMENT

ಗಮನ ಬೇರೆಡೆ ಸೆಳೆಯಲು ಸೋನಿಯಾ, ರಾಹುಲ್‌ ವಿರುದ್ಧ ಪ್ರಕರಣ: ರೇವಂತ್‌ ರೆಡ್ಡಿ

ಪಿಟಿಐ
Published 2 ಡಿಸೆಂಬರ್ 2025, 14:18 IST
Last Updated 2 ಡಿಸೆಂಬರ್ 2025, 14:18 IST
 ರೇವಂತ್‌ ರೆಡ್ಡಿ
 ರೇವಂತ್‌ ರೆಡ್ಡಿ   

ಹೈದರಾಬಾದ್‌: ಮತ ಕಳವು ಅಭಿಯಾನದಿಂದ ಜನರ ಗಮನ ಬೇರೆಡೆ ಸೆಳೆಯಲು ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವು ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ವಿರುದ್ಧ ಹೊಸ ಪ್ರಕರಣ ದಾಖಲಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಅವರು ಮಂಗಳವಾರ ಆರೋಪಿಸಿದರು.

ತೆಲಂಗಾಣದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಸೋನಿಯಾ ಮತ್ತು ರಾಹುಲ್‌ ಗಾಂಧಿ ವಿರುದ್ಧ ದಾಖಲಾಗಿರುವ ಅಕ್ರಮ ಪ್ರಕರಣವನ್ನು ತೆಲಂಗಾಣದ ಪ್ರತಿಯೊಬ್ಬ ಕಾಂಗ್ರೆಸ್‌ ಕಾರ್ಯಕರ್ತರೂ ಖಂಡಿಸುತ್ತಾರೆ ಎಂದು ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರಕ್ಕೆ ಮತ ಕಳವಿನ ಕುರಿತು ಸಂಸತ್ತಿನಲ್ಲಿ ಚರ್ಚೆ ಬೇಕಿಲ್ಲ. ಬಿಹಾರ ಚುನಾವಣೆಯಲ್ಲಿನ ದೋಷಗಳ ಕುರಿತು ಚರ್ಚೆ ತಪ್ಪಿಸಲು ನಾಲ್ಕೈದು ದಿನಗಳ ಹಿಂದೆ ಸೋನಿಯಾ ಮತ್ತು ರಾಹುಲ್‌ ಗಾಂಧಿ ವಿರುದ್ಧ ಹೊಸ ಪ್ರಕರಣ ದಾಖಲಿಸಿದ್ದಾರೆ’ ಎಂದು ಅವರು ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.