ಜೋಧ್‌ಪುರ: ‘ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮ ಅವರ ಪದಚ್ಯುತಿಗೆ ಪಿತೂರಿ ನಡೆದಿದೆ’ ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹಲೋತ್ ಬುಧವಾರ ಹೇಳಿದ್ದಾರೆ.
‘ನವದೆಹಲಿಯಿಂದ ಬಿಜೆಪಿಯ ಕೆಲವು ಪದಾಧಿಕಾರಿಗಳು ಮುಖ್ಯಮಂತ್ರಿಯ ಪದಚ್ಯುತಿಗಾಗಿಯೇ ರಾಜಸ್ಥಾನಕ್ಕೆ ಬಂದಿದ್ದಾರೆ’ ಎಂದಿದ್ದಾರೆ.
‘ಈಗಾಗಲೇ ಹಲವು ಬಾರಿ ಪದಚ್ಯುತಿಯ ಬಗ್ಗೆ ಹೇಳಿದ್ದರೂ, ಮುಖ್ಯಮಂತ್ರಿ ತಮ್ಮ ಅಜ್ಞಾನದಲ್ಲೇ ಮುಳುಗಿದ್ದಾರೆ’ ಎಂದು ಪತ್ರಕರ್ತರಿಗೆ ತಿಳಿಸಿದರು.
‘ತುರ್ತುಪರಿಸ್ಥಿತಿಯನ್ನು ಉಲ್ಲೇಖಿಸಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಟೀಕಿಸುತ್ತಿದ್ದು, ಇದರಲ್ಲಿ ಯಶಸ್ವಿಯಾಗಲ್ಲ’ ಎಂದ ಗೆಹಲೋತ್, ‘1980ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರ ಅಲೆಯಿಂದಲೇ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿತ್ತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.