ADVERTISEMENT

ರಾಜಸ್ಥಾನ: ಗೆಹಲೋತ್ ಸರ್ಕಾರದ ಕೌಂಟ್‌ಡೌನ್‌ ಶುರುವಾಗಿದೆ, ಬಿಜೆಪಿ

ಪಿಟಿಐ
Published 9 ಮಾರ್ಚ್ 2022, 15:22 IST
Last Updated 9 ಮಾರ್ಚ್ 2022, 15:22 IST
ಸಿಎಂ ಅಶೋಕ್‌ ಗೆಹಲೋತ್
ಸಿಎಂ ಅಶೋಕ್‌ ಗೆಹಲೋತ್   

ಜೈಪುರ: ಸಿಎಂ ಅಶೋಕ್‌ ಗೆಹಲೋತ್ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಕೌಂಟ್‌ಡೌನ್‌ ಶುರುವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಅರುಣ್‌ ಸಿಂಗ್‌ ಹೇಳಿದ್ದಾರೆ.

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಬಯಲಿಗೆಳೆಯುವಲ್ಲಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಗೆಹಲೋತ್ ಸರ್ಕಾರದ ವಿರುದ್ಧ ಭಾರಿ ಪ್ರಮಾಣದ ಆಡಳಿತ ವಿರೋಧಿ ಅಲೆಯಿದೆ. ಐದು ರಾಜ್ಯಗಳ ವಿಧಾನಸಭೆ ಫಲಿತಾಂಶ ಗುರುವಾರ ಪ್ರಕಟಗೊಳ್ಳುತ್ತಿದ್ದಂತೆ ಆಡಳಿತ ವಿರೋಧಿ ಅಲೆಯು ತೀವ್ರಗೊಳ್ಳಲಿದೆ ಎಂದು ಅರುಣ್‌ ಸಿಂಗ್‌ ತಿಳಿಸಿದ್ದಾರೆ.

'ಪ್ರತಿದಿನ ಘೋಷಣೆಗಳನ್ನು ಮಾಡುವ ಮೂಲಕ ಮುಖ್ಯಮಂತ್ರಿಯು 'ಘೋಷಣೆ ವೀರ'ರಾಗಿದ್ದಾರೆ. ಈ ಭರವಸೆಗಳನ್ನು ಪೂರೈಸಲು ಹಣವನ್ನು ಎಲ್ಲಿ ತರುತ್ತಾರೆ ಎಂಬುದಕ್ಕೆ ಯಾರ ಬಳಿಯೂ ಮಾಹಿತಿ ಇಲ್ಲ. 60,000 ಉದ್ಯೋಗಳನ್ನೇ ಕೊಟ್ಟಿಲ್ಲ. ಹಾಗಿದ್ದೂ 2.5 ಲಕ್ಷ ಉದ್ಯೋಗಗಳನ್ನು ಕೊಡುವ ಬಗ್ಗೆ ಮಾತನಾಡುತ್ತಾರೆ. ರೈತರ ಸಾಲವಿನ್ನೂ ಮನ್ನಾ ಆಗಿಲ್ಲ' ಎಂದರು.

ADVERTISEMENT

'ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ 5 ಸ್ಥಾನವೂ ಸಿಗುವುದಿಲ್ಲ. ಸಾಮಾಜಿಕ ಕೆಲಸಗಳನ್ನು ಮಾಡುವ ಬಗ್ಗೆ ಯೋಚಿಸದೆ ಕೇವಲ ರಾಜಕೀಯಕ್ಕಾಗಿ ಕೆಲಸ ಮಾಡಿದರೆ ಹೀಗೆ ಆಗುತ್ತದೆ' ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.