ADVERTISEMENT

ಕೋರ್ಟ್‌ಗಳು ನೈತಿಕ ಪೊಲೀಸ್‌ಗಿರಿ ಮಾಡಲಾಗದು: ಸುಪ್ರೀಂ ಕೋರ್ಟ್‌

ಪಿಟಿಐ
Published 8 ಏಪ್ರಿಲ್ 2025, 14:21 IST
Last Updated 8 ಏಪ್ರಿಲ್ 2025, 14:21 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ‘ಕೋರ್ಟ್‌ಗಳು ‘ನೈತಿಕ ಪೊಲೀಸ್‌ಗಿರಿ’ ಮಾಡಲಾಗದು’ ಎಂದು ಸ್ಪಷ್ಟವಾಗಿ ಹೇಳಿರುವ ಸುಪ್ರೀಂ ಕೋರ್ಟ್‌, ಇದಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶವೊಂದನ್ನು ಮಂಗಳವಾರ ವಜಾ ಮಾಡಿತು. 

ಜೈನ ಸಂನ್ಯಾಸಿ ತರುಣ್‌ ಸಾಗರ್ ಅವರನ್ನು ಅಣಕು ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ, ರಾಜಕೀಯ ವಿಶ್ಲೇಷಕ ತಹ್‌ಸೀನ್‌ ಪೂನಾವಾಲಾ ಅವರಿಗೆ ಹೈಕೋರ್ಟ್‌ ₹10 ಲಕ್ಷ  ದಂಡ ವಿಧಿಸಿತ್ತು. ಇದನ್ನು ಭರಿಸುವಂತೆ ಪೂನಾವಾಲಾ ಮತ್ತು ಸಂಗೀತ ಸಂಯೋಜಕ, ಗಾಯ ವಿಶಾಲ್‌ ದದ್ಲಾನಿ ಅವರಿಗೆ ಹೈಕೋರ್ಟ್‌ ಸೂಚಿಸಿತ್ತು.

‘ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ಧತಿಗೆ ತಲಾ ₹ 10 ಲಕ್ಷ ದಂಡ ಪಾವತಿಸಬೇಕು’ ಎಂದು ಹೈಕೋರ್ಟ್‌ ಇಬ್ಬರಿಗೂ ಆದೇಶಿಸಿತ್ತು. ‘ಧಾರ್ಮಿಕ ಮುಖಂಡರನ್ನು ಯಾರೂ ಅಣಕಿಸಬಾರದು ಎಂಬ ಸಂದೇಶ ರವಾನಿಸಲು ಈ ದಂಡ ವಿಧಿಸಲಾಗಿದೆ’ ಎಂದು ಹೇಳಿತ್ತು.

ADVERTISEMENT

ಪೂನಾವಾಲಾ ಅವರು ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ನ್ಯಾಯಮೂರ್ತಿಗಳಾದ ಅಭಯ್‌ ಎಸ್‌ ಓಕಾ, ಉಜ್ಜಲ್‌ ಭುಯಾನ್ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠವು, ‘ಇದೆಂತಹ ಆದೇಶ? ಅರ್ಜಿದಾರರನ್ನು ಖುಲಾಸೆಗೊಳಿಸಿ ದಂಡ ವಿಧಿಸಲಾಗಿದೆ. ಕೋರ್ಟ್‌ ನೈತಿಕ ಪೊಲೀಸ್‌ಗಿರಿ ಮಾಡಲಾಗದು’ ಎಂದು ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.