ADVERTISEMENT

ಕಾರ್ಮಿಕರ ಶೋಷಣೆ ಸಲ್ಲ: ರಾಹುಲ್ ಗಾಂಧಿ

ಪಿಟಿಐ
Published 11 ಮೇ 2020, 20:15 IST
Last Updated 11 ಮೇ 2020, 20:15 IST
   

ನವದೆಹಲಿ: ‘ಅನೇಕ ರಾಜ್ಯಗಳು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿದ್ದು, ಕೊರಾನ್ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಕಾರ್ಮಿಕರ ದನಿಯನ್ನು ಹತ್ತಿಕ್ಕುವುದಾಗಲೀ, ಅವರ ಮಾನವ ಹಕ್ಕುಗಳನ್ನು ದಮನ ಮಾಡುವುದು ಕ್ಷಮೆಗೆ ಅರ್ಹವಲ್ಲ’ ಎಂದುಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

‘ಅಸುರಕ್ಷಿತ ಸ್ಥಳಗಳಲ್ಲಿ ಕೆಲಸ ಮಾಡುವ ವಿಚಾರದಲ್ಲಿ ಯಾವುದೇ ಮೂಲಭೂತ ಸಿದ್ಧಾಂತಗಳಲ್ಲಿ ರಾಜಿ ಇಲ್ಲ’ ಎಂದೂ ಅವರು ತಿಳಿಸಿದ್ದಾರೆ.

‘ಆರ್ಥಿಕ ಪುನರುಜ್ಜೀವನದ ಹೆಸರಿನಲ್ಲಿ ಕಾರ್ಮಿಕ, ಭೂಮಿ ಮತ್ತು ಪರಿಸರ ಕಾನೂನುಗಳನ್ನು ಸಡಿಲಗೊಳಿಸುವುದು ಅಪಾಯಕಾರಿ ಮತ್ತು ಹಾನಿಕಾರಕ’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.