ADVERTISEMENT

Covid-19 India Update: 14,264 ಹೊಸ ಪ್ರಕರಣ, ದೈನಂದಿನ ಸಂಖ್ಯೆಯಲ್ಲಿ ಏರಿಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 5:49 IST
Last Updated 21 ಫೆಬ್ರುವರಿ 2021, 5:49 IST
   

ನವದೆಹಲಿ: ದೇಶದಲ್ಲಿ ದೈನಂದಿನ ಕೋವಿಡ್–19 ಪ್ರಕರಣಗಳ ಸಂಖ್ಯೆಯಲ್ಲಿ ಸತತ ನಾಲ್ಕನೇ ದಿನವೂ ಏರಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 14,264 ಹೊಸ ಪ್ರಕರಣಗಳು ದಾಖಲಾಗಿವೆ. ಹಾಗಾಗಿ, ದೇಶದಾದ್ಯಂತ ಒಟ್ಟು ಪ್ರಕರಣಗಳ ಸಂಖ್ಯೆ 1,09,91,651 ಕ್ಕೆ ತಲುಪಿದೆ ಎಂದು ಭಾನುವಾರ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶ ತಿಳಿಸಿದೆ.

ಒಂದೇ ದಿನ 90 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 1,56,302ಕ್ಕೆ ಏರಿದೆ.

ಜನವರಿ 29 ರಂದು ಈ ವರ್ಷ ಒಂದು ದಿನದಲ್ಲಿ ಅತ್ಯಧಿಕ 18,855 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು.

ಇದುವರೆಗೆ ಕೊರೊನಾ ಸೊಂಕಿನಿಂದ 1,06,89,715 ಮಂದಿ ಚೇತರಿಸಿಕೊಂಡಿದ್ದಾರೆ. ಹಾಗಾಗಿ, ರಾಷ್ಟ್ರೀಯ ಚೇತರಿಕೆ ದರ ಶೇ. 97.25 ರಷ್ಟಾಗಿದೆ. ಸಾವಿನ ಪ್ರಮಾಣವು ಶೇ. 1.42 ರಷ್ಟಿದೆ. ಸದ್ಯ, ಕೋವಿಡ್–19 ಸಕ್ರಿಯ ಪ್ರಕರಣಗಳ ಸಂಕ್ಯೆ ಒಂದೂವರೆ ಲಕ್ಷಕ್ಕಿಂತ ಕಡಿಮೆ ಇದೆ.

ಸದ್ಯ ದೇಶದಲ್ಲಿ 1,45,634 ಸಕ್ರಿಯ ಪ್ರಕರಣಗಳಿದ್ದು, ಇದು ಒಟ್ಟು ಸಂಖ್ಯೆಯ ಶೇ. 1.32 ರಷ್ಟಾಗುತ್ತದೆ.

ಭಾರತದಲ್ಲಿ ಆಗಸ್ಟ್ 7 ರಂದು ಕೊರೊನಾ ಸೋಂಕಿತರ ಸಂಖ್ಯೆ 20 ಲಕ್ಷ ಮುಟ್ಟಿತ್ತು. ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ. ಈ ಸಂಖ್ಯೆ ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿತ್ತು. ಅಕ್ಟೋಬರ್ 11 ರ ಹೊತ್ತಿಗೆ 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿತ್ತು.

ಐಸಿಎಂಆರ್ ಪ್ರಕಾರ, ಫೆಬ್ರವರಿ 20 ರವರೆಗೆ 21,09,31,530 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಶನಿವಾರ 6,70,050 ಮಾದರಿಗಳನ್ನು ಟೆಸ್ಟ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.