ADVERTISEMENT

ಮಹಾರಾಷ್ಟ್ರ: ಮನೆಯಲ್ಲೇ ಈದ್ ಆಚರಣೆಗೆ ಮುಸ್ಲಿಂ ಧರ್ಮಗುರುಗಳ ಸಲಹೆ

ಪಿಟಿಐ
Published 12 ಮೇ 2021, 12:36 IST
Last Updated 12 ಮೇ 2021, 12:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಲ್ನಾ: ಕೋವಿಡ್ ಸಾಂಕ್ರಾಮಿಕ ರೋಗವು ವಿಪರೀತ ಏರಿಕೆ ಹಿನ್ನೆಲೆಯಲ್ಲಿ ಈದ್-ಉಲ್-ಫಿತರ್ ಸಂದರ್ಭದಲ್ಲಿ ಯಾವುದೇ ಸಭೆಯ ಪ್ರಾರ್ಥನೆಗಳು ಮತ್ತು ಗುಂಪು ಸೇರುವಿಕೆ ಇರುವುದಿಲ್ಲ. ಮನೆಯಲ್ಲಿಯೇ ಸುರಕ್ಷಿತವಾಗಿ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸುವಂತೆ ಮುಸ್ಲಿಂ ಧರ್ಮಗುರುಗಳು ಸಮುದಾಯಕ್ಕೆ ಸಂದೇಶ ನೀಡಿದ್ದಾರೆ.

ತಿಂಗಳ ಉಪವಾಸದ ಅಂತ್ಯದಲ್ಲಿ ಆಚರಿಸಲಾಗುವ ಈದ್-ಉಲ್-ಫಿತರ್ ಅನ್ನು ಚಂದ್ರನ ದರ್ಶನದ ಆಧಾರದ ಮೇಲೆ ಮೇ 13 ಅಥವಾ ಮೇ 14 ರಂದು ಆಚರಿಸಲಾಗುವುದು.

ಮಹಾರಾಷ್ಟ್ರ ಸರ್ಕಾರವು ಈಗಾಗಲೇ ಮಾರ್ಗಸೂಚಿಗಳನ್ನು ಜಾರಿ ಮಾಡಿದ್ದು, ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲು ಜನರಿಗೆ ಮನವಿ ಮಾಡಿದೆ. ಯಾವುದೇ ಮೆರವಣಿಗೆಗಳನ್ನು ನಡೆಸದಂತೆ ಮತ್ತು ರಾಜ್ಯದಲ್ಲಿ ಜಾರಿಗೊಳಿಸಲಾದ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಸಭೆಗಳನ್ನು ನಡೆಸದಂತೆ ಸಲಹೆ ನೀಡಿದೆ.

ADVERTISEMENT

‘ಯಾತನೆ, ಭಯ ಮತ್ತು ಆತಂಕದ ಮಧ್ಯೆ, ನಾವು ಈ ವರ್ಷ ಈದ್ ಅನ್ನು ಮನೆಯಲ್ಲಿ ಆಚರಿಸಬೇಕಾಗಿದೆ’ ಎಂದು ಜಮೀಯತ್ ಉಲೆಮಾ-ಎ-ಹಿಂದ್ (ಅರ್ಷದ್ ಮಂಡಿ ಫ್ಯಾಕ್ಷನ್) ಮರಾಠವಾಡ ಘಟಕದ ಅಧ್ಯಕ್ಷ ಮೌಲಾನಾ ಸೊಹೆಲ್ ಹೇಳಿದ್ದಾರೆ.

ಜಲ್ನಾದ 'ಹೋಲಿ ಕುರಾನ್ ಸೆಂಟರ್'ನ ಸಂಯೋಜಕ ಅಬ್ದುಲ್ ಹಫೀಜ್, ಈ ವರ್ಷದ ಈದ್ ಸಂದರ್ಭದಲ್ಲಿ ಸಭೆಗಳು ಮತ್ತು ಕೂಟಗಳನ್ನಿ ನಡೆಸುವುದು ದೂರದ ಮಾತು ಎಂದು ಹೇಳಿದರು.

ಆದರೂ, ಜನರು ವರ್ಚುವಲ್ ಆಗಿ ಪರಸ್ಪರ ಸಂಪರ್ಕ ಸಾಧಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.