ನವದೆಹಲಿ: 12ನೇ ತರಗತಿಯ ಐಚ್ಛಿಕ(ಆಪ್ಷನಲ್) ಪರೀಕ್ಷೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಸಿಬಿಎಸ್‌ಇ ಗುರುವಾರ ತಿಳಿಸಿದೆ.
10 ಮತ್ತು 12ನೇ ತರಗತಿಗೆ ನಡೆಸಲಾಗುವ ಪೂರಕ ಪರೀಕ್ಷೆ ಜೊತೆಯೇ ಈ ಪರೀಕ್ಷೆಗಳು ನಡೆಯಲಿವೆ.
ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಬಹುದು. ಕೋವಿಡ್–19 ಪಿಡುಗಿನ ಕಾರಣದಿಂದಾಗಿ ಕೆಲವು ವಿಷಯಗಳ ಪರೀಕ್ಷೆಗಳು ರದ್ದಾಗಿದ್ದವು. ವಿದ್ಯಾರ್ಥಿಗಳ ಹಿಂದಿನ ಶೈಕ್ಷಣಿಕ ಪ್ರಗತಿ ವಿಶ್ಲೇಷಿಸಿ ಫಲಿತಾಂಶ ಪ್ರಕಟಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.