ADVERTISEMENT

ಕೋವಿಡ್‌: 26ರಿಂದ ತಮಿಳುನಾಡಿನಲ್ಲಿ ಚಿತ್ರಮಂದಿರ, ಮಾಲ್‌ ಬಂದ್‌

ಪಿಟಿಐ
Published 24 ಏಪ್ರಿಲ್ 2021, 17:10 IST
Last Updated 24 ಏಪ್ರಿಲ್ 2021, 17:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ರಾಜ್ಯದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಇದೇ 26ರಿಂದ ಚಿತ್ರಮಂದಿರಗಳು, ಧಾರ್ಮಿಕ ಸ್ಥಳಗಳು, ಮಾಲ್‌ಗಳು, ಬಾರ್‌ ಹಾಗೂ ಸಲೂನ್‌ಗಳನ್ನು ಬಂದ್‌ ಮಾಡಲಾಗುವುದು ಎಂದು ತಮಿಳುನಾಡು ಸರ್ಕಾರ ಶನಿವಾರ ಘೋಷಿಸಿದೆ.

ಅಧಿಕೃತ ವೆಬ್‌ಸೈಟ್‌ನಲ್ಲಿ (https://eregister.tnega.org) ನೋಂದಾಯಿಸಿಕೊಂಡಿರುವ ಇತರ ರಾಜ್ಯಗಳ ಜನರು ಹಾಗೂ ವಿದೇಶಗಳಿಂದ ಬಂದವರಿಗೆ ತಮಿಳುನಾಡು ಪ್ರವೇಶಿಸಲು ಅನುಮತಿ ನೀಡಲಾಗುವುದು. ನೋಂದಣಿ ಮಾಡಿಸಿರುವ ಕುರಿತ ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT