ADVERTISEMENT

ಕೋವಿಡ್‌–19 ದೃಢಗೊಳ್ಳುವ ಪ್ರಮಾಣ: 12 ದಿನಗಳಲ್ಲಿ ದುಪ್ಪಟ್ಟು: ಆರೋಗ್ಯ ಸಚಿವಾಲಯ

ಪಿಟಿಐ
Published 18 ಏಪ್ರಿಲ್ 2021, 11:46 IST
Last Updated 18 ಏಪ್ರಿಲ್ 2021, 11:46 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ನವದೆಹಲಿ: ದೇಶದಲ್ಲಿ ಪ್ರತಿನಿತ್ಯ ಕೋವಿಡ್‌–19 ದೃಢಪಡುವ ಪ್ರಮಾಣ (ಪಾಸಿಟಿವಿಟಿ ರೇಟ್‌) ಕಳೆದ 12 ದಿನಗಳಲ್ಲಿ ದುಪ್ಪಟ್ಟಾಗಿದ್ದು, ಶೇ 16.69ರಷ್ಟಾಗಿದೆಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

‘ಈ ಮೊದಲು ಪಾಸಿಟಿವಿಟಿ ಪ್ರಮಾಣ ಶೆ 8ರಷ್ಟಿತ್ತು. ಆದರೆ, ಈ 12 ದಿನಗಳಲ್ಲಿ ಇದು ದುಪ್ಪಟ್ಟಾಗಿದೆ‘ ಎಂದು ಸಚಿವಾಲಯ ತಿಳಿಸಿದೆ.

ಈ ಮೊದಲು, ಒಂದು ವಾರದ ಅವಧಿಯಲ್ಲಿನ ಪಾಸಿಟಿವಿಟಿ ಪ್ರಮಾಣ ಶೇ 3.05ರಷ್ಟಿತ್ತು. ಆದರೆ, ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಪ್ರಮಾಣದಲ್ಲಿಯೂ ಹೆಚ್ಚಳ ಕಂಡುಬಂದಿದ್ದು, ಶೇ 13.54ರಷ್ಟಾಗಿದೆ ಎಂದೂ ತಿಳಿಸಿದೆ.

ADVERTISEMENT

ದೇಶದಲ್ಲಿ ಕೋವಿಡ್‌–19 ತೀವ್ರಗತಿಯಲ್ಲಿ ಪ್ರಸರಣವಾಗುತ್ತಿರುವುದನ್ನು ಈ ಅಂಕಿ–ಅಂಶಗಳು ಹೇಳುತ್ತವೆ. ದೇಶದಲ್ಲಿ ಭಾನುವಾರ 2,61,500 ಹೊಸ ಪ್ರಕರಣಗಳು ವರದಿಯಾಗಿದ್ದು, 1,501 ಜನರು ಈ ಪಿಡುಗಿನಿಂದಾಗಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18 ಲಕ್ಷ ದಾಟಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ವರದಿಯಾದ ಪ್ರಕರಣಗಳ ಪೈಕಿ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 10 ರಾಜ್ಯಗಳಲ್ಲಿ ಕಂಡುಬಂದ ಸೋಂಕಿನ ಪ್ರಮಾಣ ಶೇ 78.56 ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.