ADVERTISEMENT

ಕೋವಿಡ್‌ ಲಸಿಕೆ ಮಿಶ್ರಣ: ಹೊಂದಾಣಿಕೆ ಪ್ರಯೋಗದಿಂದ ಮಿಶ್ರ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 11 ಮೇ 2022, 15:33 IST
Last Updated 11 ಮೇ 2022, 15:33 IST
   

ನವದೆಹಲಿ: ಕೋವಿಡ್ ಲಸಿಕೆಗಳ ಮಿಶ್ರಣ ಮತ್ತು ಹೊಂದಾಣಿಕೆ ಪ್ರಯೋಗವು ಮಿಶ್ರ ಫಲಿತಾಂಶಗಳನ್ನು ನೀಡಿದೆ. ಎರಡು ಗುಂಪುಗಳ ಸ್ವಯಂ ಸೇವಕರು ಎರಡು ವಿಭಿನ್ನ ಲಸಿಕೆಗಳ ಮಿಶ್ರಣ ಪಡೆದಿರುವುದರಿಂದ ಸಂಪೂರ್ಣವಾಗಿ ವಿರುದ್ಧ ಫಲಿತಾಂಶಗಳಿಗೆ ಕಾರಣವಾಗಿದೆ.

ಪ್ರಯೋಗದ ಫಲಿತಾಂಶವನ್ನು ಕಳೆದ ವಾರ ಇಮ್ಯುನೈಸೇಶನ್‌ನ (ಪ್ರತಿರಕ್ಷಣೆ) ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಹಂಚಿಕೊಳ್ಳಲಾಗಿದೆ. ಆದರೆ ಭಾರತದ ಔಷಧ ಮಹಾನಿಯಂತ್ರಕರ ಎದುರು ಇನ್ನೂ ಪ್ರಸ್ತುತಪಡಿಸಬೇಕಾಗಿದೆ.

ವಿಭಿನ್ನ ಲಸಿಕೆ ಮಿಶ್ರಣ ಉತ್ತಮ ರಕ್ಷಣೆ ನೀಡುವುದಿಲ್ಲ ಎಂದು ಈ ಹಂತದಲ್ಲಿ ಹೇಳುವುದು ಸರಿಯಲ್ಲ ಎಂದು ಈ ಕುರಿತು ಅಧ್ಯಯನ ನಡೆಸಿದ ವೆಲ್ಲೂರಿನ ಕ್ರಿಶ್ಚಿಯನ್‌ ವೈದ್ಯಕೀಯ ಕಾಲೇಜಿನ (ಸಿಎಂಸಿ) ಸಂಶೋಧಕರು ಹೇಳಿದ್ದಾರೆ. ಉತ್ತಮ ಫಲಿತಾಂಶ ಕಂಡುಹಿಡಿಯಲು ಸಿಎಂಸಿ ಸಂಶೋಧಕರು ತಲಾ 100 ಸ್ವಯಂ ಸೇವಕರನ್ನು ಹೊಂದಿದ್ದ ನಾಲ್ಕು ಗುಂಪುಗಳೊಂದಿಗೆ ಪ್ರಯೋಗ ನಡೆಸಿದೆ.

ADVERTISEMENT

‘ಎರಡು ಗುಂಪುಗಳು ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನ (ಎರಡು ಪ್ರಾಥಮಿಕ ಡೋಸ್‌ಗಳು ಮತ್ತು ಒಂದು ಬೂಸ್ಟರ್) ಮೂರು ಡೋಸ್‌ಗಳನ್ನು ಪಡೆದರೆ, ಮೂರನೇ ಗುಂಪು ಕೋವಿಶೀಲ್ಡ್‌ನ ಎರಡು ಡೋಸ್‌ಗಳು ಹಾಗೂ ನಂತರ ಕೋವಾಕ್ಸಿನ್ ಪಡೆದುಕೊಂಡಿತು. ನಾಲ್ಕನೇ ತಂಡವು ಎರಡು ಕೋವಾಕ್ಸಿನ್ ಡೋಸ್‌ಗಳನ್ನು ಪಡೆಯಿತು. ನಂತರ ಕೋವಿಶೀಲ್ಡ್ ಬೂಸ್ಟ್ ಅನ್ನು ಸಹ ಪಡೆದುಕೊಂಡಿತು. ವಿಭಿನ್ನ ಲಸಿಕೆ ಮಿಶ್ರಣ ಪಡೆದ ಎರಡು ಗುಂಪುಗಳು ವ್ಯತಿರಿಕ್ತ ಫಲಿತಾಂಶಗಳನ್ನು ನೀಡಿವೆ. ಈ ಕುರಿತ ವರದಿಯನ್ನು ಡಿಸಿಜಿಐಗೆ ಸಲ್ಲಿಸಲಾಗುವುದು’ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ವಿನ್ಸ್ಲೆ ರಾಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.