ADVERTISEMENT

ಲೈಂಗಿಕ ದೌರ್ಜನ್ಯ ದೂರು: ಸಿಪಿಎಂನಿಂದ ಆಂತರಿಕ ಸಮಿತಿ ರಚನೆ

ಪಿಟಿಐ
Published 22 ನವೆಂಬರ್ 2018, 10:58 IST
Last Updated 22 ನವೆಂಬರ್ 2018, 10:58 IST

ನವದೆಹಲಿ: ಲೈಂಗಿಕ ದೌರ್ಜನ್ಯ ಕುರಿತ ದೂರುಗಳ ಪರಿಶೀಲನೆಗೆ ಆಂತರಿಕ ಸಮಿತಿಯನ್ನು ಸಿಪಿಎಂ ರಚಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈ ಸಂಬಂಧ ಸಚಿವಾಲಯದ ಮನವಿಗೆ ಸ್ಪಂದಿಸಿದ ಏಕೈಕ ಪಕ್ಷವಾಗಿದೆ ಎಂದು ತಿಳಿಸಿದೆ.

ಮೀ–ಟೂ ಅಭಿಯಾನದ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಆಂತರಿಕ ದೂರು ಸಮಿತಿಯೊಂದರನ್ನು‌ರಚಿಸುವಂತೆ ಸಚಿವೆ ಮೇನಕಾ ಗಾಂಧಿ ಅವರು ಅಕ್ಟೋಬರ್ 18ರಂದು ಮನವಿ ಮಾಡಿದ್ದರು. ಇದಕ್ಕೆ ಸಿಪಿಎಂ ಮಾತ್ರ ಸ್ಪಂದಿಸಿದ್ದು, ಸಚಿವರಿಗೆ ಪತ್ರ ಬರೆದಿದೆ.

ADVERTISEMENT

ಆರು ರಾಷ್ಟ್ರೀಯ ಪಕ್ಷಗಳು ಹಾಗೂ 59 ಪ್ರಾದೇಶಿಕ ಪಕ್ಷಗಳಿಗೆ ಮೇನಕಾ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.