ಎಚ್–1ಬಿ ವೀಸಾ
ನವದೆಹಲಿ : ‘ಅಮೆರಿಕವು ತನ್ನ ವ್ಯಾಪಾರ ಹಿತಾಸಕ್ತಿ ರಕ್ಷಿಸಿಕೊಳ್ಳಲು ಭಾರತದ ಮೇಲೆ ಬಲವಂತದ ತಂತ್ರಗಳನ್ನು ಅನುಸರಿಸುತ್ತಿದೆ. ಕೇಂದ್ರ ಸರ್ಕಾರವು ಈ ಅನ್ಯಾಯದ ವಿರುದ್ಧ ದೃಢ ನಿಲುವು ತೆಗೆದುಕೊಳ್ಳಬೇಕು’ ಎಂದು ಸಿಪಿಎಂ ಪಾಲಿಟ್‌ಬ್ಯೂರೊ ಆಗ್ರಹಿಸಿದೆ.
ಅಮೆರಿಕದ ಶೇ 50 ಸುಂಕ ನೀತಿಗೆ ಭಾರತ ಮಣಿಯುವಂತೆ ಮಾಡಲು ಎಚ್–1ಬಿ ವೀಸಾ ಅರ್ಜಿಯ ಶುಲ್ಕ ಹೆಚ್ಚಳದಂತಹ ಬಲವಂತದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆನ್ನು ಎಡಪಕ್ಷಗಳು ಬಯಸುತ್ತವೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.