ADVERTISEMENT

ಸಿಆರ್‌ಪಿಎಫ್‌ಗೆ ಬುಲೆಟ್‌ಪ್ರೂಫ್ ಜಾಕೆಟ್‌‌

ಪಿಟಿಐ
Published 31 ಮೇ 2020, 20:15 IST
Last Updated 31 ಮೇ 2020, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧ ಹಾಗೂ ವಿವಿಧ ರಾಜ್ಯಗಳಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆಗಾಗಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗೆ(ಸಿಆರ್‌ಪಿಎಫ್‌) 40 ಸಾವಿರ ಗುಂಡು ನಿರೋಧಕ(ಬುಲೆಟ್‌ಪ್ರೂಫ್‌) ಜಾಕೆಟ್ ಹಾಗೂ 170 ಸಶಸ್ತ್ರ ವಾಹನಗಳನ್ನು ಕೇಂದ್ರ ಗೃಹ ಇಲಾಖೆ ಮಂಜೂರು ಮಾಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವಕೇಂದ್ರೀಯ ಅರೆಸೇನಾ ಪಡೆಯ ಯೋಧರ ಸುರಕ್ಷತೆಗಾಗಿ 80 ಗುಂಡು ನಿರೋಧಕ ಕವಚವುಳ್ಳ ಮಾರುತಿ ಜಿಪ್ಸಿ ವಾಹನಗಳನ್ನು ನೀಡಲಾಗುತ್ತಿದೆ. ಸಿಆರ್‌ಪಿಎಫ್‌ಗೆ ನೀಡಲಾಗುತ್ತಿರುವ ಸಶಸ್ತ್ರ ವಾಹನಗಳು ಗ್ರೆನೆಡ್ ದಾಳಿ, ಗುಂಡಿನ ದಾಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಈ ವಾಹನಗಳಲ್ಲಿ 5–6 ಯೋಧರು ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT