ನವದೆಹಲಿ: ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯಂತಹ ಗಣ್ಯವಕ್ತಿಗಳು ಪ್ರಯಾಣಿಸುವ ವಿಶೇಷಬಿ 777 ವಿಮಾನವೊಂದು ಅಮೆರಿಕದಿಂದ ಗುರುವಾರ ದೆಹಲಿಗೆ ಬಂದು ಇಳಿದಿದೆ.
ಏರ್‌ಕ್ರಾಪ್ಟ್ ಚಿಹ್ನೆಎಂದೇ ಗುರುತಿಸಿರುವ ಈ ಏರ್ ಇಂಡಿಯಾ ಒನ್ ವಿಮಾನ ಗುರುವಾರ ಮಧ್ಯಾಹ್ನ 3 ಗಂಟೆಗೆ ಅಮೆರಿಕದ ಟೆಕ್ಸಾಸ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ವಿಮಾನ ತಯಾರಕ ಕಂಪನಿ ಬೋಯಿಂಗ್ ಕಂಪನಿ ಈ ವಿಮಾನಗಳನ್ನು ಜುಲೈನಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಹಸ್ತಾಂತರಿಸ ಬೇಕಿತ್ತು. ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ವಿತರಣೆ ಎರಡು ಬಾರಿ ವಿಳಂಬವಾಯಿತು. ಮುಂದೆ ಇಂಥದ್ದೇ ಗಣ್ಯವ್ಯಕ್ತಿಗಳು ಪ್ರಯಾಣಿಸುವ ವಿಶೇಷವಾಗಿ ನಿರ್ಮಿಸಲಾದಮತ್ತೊಂದು ಬಿ 777 ವಿಮಾನವೂ ದೇಶಕ್ಕೆ ಬರಲಿದೆ.
ಈ ಎರಡೂ ವಿಮಾನಗಳು ವಿವಿಐಪಿಗಳು ಸಂಚರಿಸುವ ಸುಸಜ್ಜಿತ ವಿಮಾನಗಳನ್ನಾಗಿಸಿ ಮಾರ್ಪಡಿಸುವ ಮುನ್ನ 2018ರಲ್ಲಿ ಏರ್ ಇಂಡಿಯಾದ ವಾಣಿಜ್ಯ ವಿಭಾಗದಲ್ಲಿದ್ದವು. ಈ ಎರಡು ವಿಮಾನಗಳ ಬೆಲೆ ₹ 8600 ಕೋಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.