ADVERTISEMENT

ಭ್ರಷ್ಟಾಚಾರ ತಡೆಗೆ ಯುರೋಪಿನಲ್ಲಿ ತರಬೇತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 18:17 IST
Last Updated 2 ಏಪ್ರಿಲ್ 2019, 18:17 IST

ನವದೆಹಲಿ (ಪಿಟಿಐ): ದೇಶದ ಭ್ರಷ್ಟಾಚಾರ, ಅಕ್ರಮಗಳ ಮೇಲೆ ಕಣ್ಗಾವಲಿಟ್ಟಿರುವ ಕೇಂದ್ರೀಯ ವಿಚಕ್ಷಣಾ ಆಯೋಗದ (ಸಿವಿಸಿ) ಅಧಿಕಾರಿಗಳಿಗೆ ಯುರೋಪಿನ ಭ್ರಷ್ಟಾಚಾರ ತಡೆ ಅಧಿಕಾರಿಗಳಿಂದ ತರಬೇತಿ ಕೊಡಿಸಲು ಆಯೋಗ ಮುಂದಾಗಿದೆ.

ಸಿವಿಸಿಯು ಸಂಘಟಿತ ಕಣ್ಗಾವಲು ಸಂಬಂಧಿತ ತರಬೇತಿಯನ್ನು ಆಸ್ಟ್ರಿಯಾದ ವಿಯೆನ್ನಾದಲ್ಲಿನ ಅಂತರರಾಷ್ಟ್ರೀಯ ಭ್ರಷ್ಟಾಚಾರ ತಡೆ ಅಕಾಡೆಮಿ (ಐಎಸಿಎ)ಯಲ್ಲಿ ಜೂನ್‌ 3ರಿಂದ 14ರವರೆಗೆ ಆಯೋಜಿಸಿದೆ.

ಭ್ರಷ್ಟಾಚಾರ ಸಂಬಂಧಿಸಿದಂತೆ 2017ರಲ್ಲಿ ಸಿವಿಸಿಯಲ್ಲಿ 23,609 ದೂರುಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ರೈಲ್ವೆ ಸಿಬ್ಬಂದಿ ವಿರುದ್ಧ 12,089 ಹಾಗೂ ವಿವಿಧ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ 8,000 ದೂರುಗಳು ಸಲ್ಲಿಕೆಯಾಗಿದ್ದವು ಎಂದು ಸಿವಿಸಿ ಕಳೆದ ವರ್ಷ ವಾರ್ಷಿಕ ವರದಿಯನ್ನು ಸಂಸತ್ತಿನ ಮುಂದಿಟ್ಟಿತ್ತು.

ADVERTISEMENT

ಕೇಂದ್ರ ಸರ್ಕಾರ ಫೆಬ್ರುವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಅಧಿಕಾರಿಗಳ ಸ್ವದೇಶ ಮತ್ತು ವಿದೇಶದಲ್ಲಿನ ತರಬೇತಿಗೆಂದು ಸಿಬ್ಬಂದಿ ಸಚಿವಾಲಯಕ್ಕೆ ₹ 240 ಕೋಟಿ ಒದಗಿಸಿದೆ. ಸಿವಿಸಿಗೆ ನೋಡಲ್‌ ಇಲಾಖೆಯಾಗಿ ಸಿಬ್ಬಂದಿ ಸಚಿವಾಲಯ ಕಾರ್ಯ ನಿರ್ವಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.