ADVERTISEMENT

ಸಿಂಘು ಗಡಿ ಬಳಿ ಹತ್ಯೆ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಪಿಟಿಐ
Published 16 ಅಕ್ಟೋಬರ್ 2021, 11:25 IST
Last Updated 16 ಅಕ್ಟೋಬರ್ 2021, 11:25 IST
ಸಿಂಘು ಗಡಿ(ಪ್ರಾತಿನಿಧಿಕ ಚಿತ್ರ)
ಸಿಂಘು ಗಡಿ(ಪ್ರಾತಿನಿಧಿಕ ಚಿತ್ರ)   

ನವದೆಹಲಿ: ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ ಸಮೀಪದಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು ಮೃತ ದೇಹವನ್ನು ತಂತಿ ಬೇಲಿಗೆ ಕಟ್ಟಿ ಹಾಕಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪರಿಶಿಷ್ಟರ 15ಕ್ಕೂ ಹೆಚ್ಚು ಸಂಘಟನೆಗಳು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಶನಿವಾರ ಮನವಿ ಸಲ್ಲಿಸಿದವು.

ಅಖಿಲ ಭಾರತೀಯ ಖಾಟಿಕ್ ಸಮಾಜ, ಅಖಿಲ ಭಾರತೀಯ ಬೇರ್ವ ವಿಕಾಸ ಸಂಘ, ಧನಕ್ ವೆಲ್ಫೇರ್ ಅಸೋಸಿಯೇಶನ್ ಮತ್ತು ಪರಿಶಿಷ್ಟ ನೌಕರರು ಮತ್ತು ವೃತ್ತಿಪರರ ಇತರ ಸಂಘಟನೆಗಳನ್ನು ಒಳಗೊಂಡಂತೆ 15ಕ್ಕೂ ಹೆಚ್ಚು ಸಂಘಟನೆಗಳು ಆಯೋಗದ ಅಧ್ಯಕ್ಷ ವಿಜಯ್ ಸಾಂಪ್ಲಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದವು.

ಪಂಜಾಬ್‌ನ ತರನ್‌ ತರನ್ ಜಿಲ್ಲೆಯ ಲಖ್‌ಬೀರ್ ಸಿಂಗ್ (35) ಅವರ ಮೃತದೇಹವು ರೈತರು ಪ್ರತಿಭಟನೆ ನಡೆಸುತ್ತಿದ್ದ ಸಿಂಘು ಗಡಿ ಸಮೀಪದಲ್ಲಿ ಪೊಲೀಸರು ನಿರ್ಮಿಸಿದ್ದ ಮುಳ್ಳು ತಂತಿಗಳ ತಡೆಗೋಡೆಗೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆಯ ಹಿಂದೆ ನಿಹಾಂಗ್‌ಗಳ ಗುಂಪಿನ ಕೈವಾಡವಿದೆ ಎಂದು ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.