ADVERTISEMENT

ಅಧಿವೇಶನ: 11ಕ್ಕೆ ಸರ್ವಪಕ್ಷ ಸಭೆ

ಪಿಟಿಐ
Published 5 ಡಿಸೆಂಬರ್ 2018, 19:23 IST
Last Updated 5 ಡಿಸೆಂಬರ್ 2018, 19:23 IST

ನವದೆಹಲಿ: ಸಂಸತ್ ಕಲಾಪವನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಅಧಿವೇಶನದ ಮೊದಲ ದಿನ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ಚಳಿಗಾಲದ ಅಧಿವೇಶನ ಡಿಸೆಂಬರ್‌11ರಿಂದ ಜನವರಿ 8ರ ತನಕ ನಡೆಯಲಿದ್ದು, ಲೋಕಸಭಾ ಚುನಾವಣೆಗೂ ಮುನ್ನ ನಡೆಯಲಿರುವ ಪೂರ್ಣಪ್ರಮಾಣದ ಅಧಿವೇಶನ ಇದಾಗಲಿದೆ. ಅದೇ ದಿನ ಐದು ರಾಜ್ಯಗಳ ಫಲಿತಾಂಶವೂ ಹೊರಬೀಳಲಿದೆ.

ಮತ್ತೊಂದೆಡೆ ಮೇಲ್ಮನೆಯ ಕಲಾಪ ಸುಗಮವಾಗಿ ನಡೆಯುವ ಸಲುವಾಗಿ ಡಿಸೆಂಬರ್‌ 10ರಂದು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.