ADVERTISEMENT

ಮಣಿಪುರ ಜನಾಂಗೀಯ ಸಂಘರ್ಷ ಕುರಿತ ಅಮೆರಿಕದ ವರದಿ ಪಕ್ಷಪಾತಿ: ಕೇಂದ್ರ ಸರ್ಕಾರ

ಪಿಟಿಐ
Published 25 ಏಪ್ರಿಲ್ 2024, 23:46 IST
Last Updated 25 ಏಪ್ರಿಲ್ 2024, 23:46 IST
<div class="paragraphs"><p>ಮಣಿಪುರ ಜನಾಂಗೀಯ ಸಂಘರ್ಷದ ದೃಶ್ಯ</p></div>

ಮಣಿಪುರ ಜನಾಂಗೀಯ ಸಂಘರ್ಷದ ದೃಶ್ಯ

   

ಪಿಟಿಐ ಚಿತ್ರ

ನವದೆಹಲಿ: ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಶುರುವಾದ ನಂತರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂದು ಅಮೆರಿಕ ಸರ್ಕಾರದ ವರದಿಯೊಂದು ಹೇಳಿರುವುದು ‘ತೀರಾ ಪಕ್ಷಪಾತದಿಂದ ಕೂಡಿದೆ’ ಎಂದು ಕೇಂದ್ರ ಸರ್ಕಾರ ಗುರುವಾರ ಪ್ರತಿಕ್ರಿಯಿಸಿದೆ.

ADVERTISEMENT

ಭಾರತದ ಬಗ್ಗೆ ಸರಿಯಾಗಿ ಅರಿಯದೆ ಸಿದ್ಧಪಡಿಸಿರುವ ವರದಿ ಇದು. ಇದಕ್ಕೆ ಬೆಲೆ ಇಲ್ಲ ಎಂದು ಕೂಡ ಕೇಂದ್ರವು ಖಾರವಾಗಿ ಹೇಳಿದೆ. ಅಮೆರಿಕದ ವಿದೇಶಾಂಗ ಇಲಾಖೆಯು ಈ ವರದಿಯನ್ನು ಸಿದ್ಧಪಡಿಸಿದೆ.

ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ (ಬಿಬಿಸಿ) ಕಚೇರಿಯ ಮೇಲೆ ಕೇಂದ್ರ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ಕುರಿತೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.