ADVERTISEMENT

ವಿದೇಶಿಯರ ವಿರುದ್ಧ ಅಪರಾಧ: ದೆಹಲಿಯಲ್ಲಿಯೇ ಅಧಿಕ- ಎನ್‌ಸಿಆರ್‌ಬಿ ವರದಿ

ಕಳೆದ ವರ್ಷ ದಾಖಲಾದ ಪ್ರಕರಣ ಉಲ್ಲೇಖಿಸಿ ಎನ್‌ಸಿಆರ್‌ಬಿ ವರದಿ

ಪಿಟಿಐ
Published 30 ಸೆಪ್ಟೆಂಬರ್ 2020, 10:54 IST
Last Updated 30 ಸೆಪ್ಟೆಂಬರ್ 2020, 10:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ಕಳೆದ ವರ್ಷ ವಿದೇಶಿಯರ ವಿರುದ್ಧ ನಡೆದ ಅಪರಾಧಗಳ ಸಂಖ್ಯೆಗೆ ಸಂಬಂಧಿಸಿದಂತೆ ದೇಶದ ಇತರ ನಗರಗಳಿಗೆ ಹೋಲಿಸಿದರೆ ರಾಷ್ಟ್ರ ರಾಜಧಾನಿಯಲ್ಲಿ ಅಧಿಕ ಪ್ರಕರಣಗಳು ದಾಖಲಾಗಿವೆ.

ದೆಹಲಿಯಲ್ಲಿ ಇಂತಹ ಪ್ರಕರಣಗಳ ಪ್ರಮಾಣ ಶೇ 30.1ರಷ್ಟಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (ಶೇ 11.7) ಹಾಗೂ ಕರ್ನಾಟಕ (ಶೇ 11.2) ಇವೆಎಂದು ರಾಷ್ಟ್ರೀಯ ಅಪರಾಧಗಳ ದಾಖಲೆ ಸಂಸ್ಥೆ (ಎನ್‌ಸಿಆರ್‌ಬಿ) ವರದಿ ಹೇಳುತ್ತದೆ.

ದೆಹಲಿಯಲ್ಲಿ 123, ಮಹಾರಾಷ್ಟ್ರದಲ್ಲಿ 48 ಹಾಗೂ ಕರ್ನಾಟಕದಲ್ಲಿ 46 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ದೇಶದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ದಾಖಲಾದ ಪ್ರಕರಣಗಳ ಪ್ರಮಾಣ ಶೇ 53ರಷ್ಟಾಗಲಿದೆ ಎಂದು ವರದಿ ಹೇಳುತ್ತದೆ.

ADVERTISEMENT

ಅತ್ಯಾಚಾರ, ಕೊಲೆ ಹಾಗೂ ಕಳ್ಳತನಕ್ಕೆ ಸಂಬಂಧಿಸಿ 2019ರಲ್ಲಿ ವಿದೇಶಿಯರ ವಿರುದ್ಧ 409 ಪ್ರಕರಣಗಳು ದಾಖಲಾಗಿವೆ. 2018ರಲ್ಲಿ 517 ಹಾಗೂ 2018ರಲ್ಲಿ 492 ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ 5.6ರಷ್ಟು ಪ್ರಕರಣಗಳು ತಮಿಳುನಾಡಿನಲ್ಲಿ ದಾಖಲಾಗಿವೆ. ಗೋವಾ ಮತ್ತು ಉತ್ತರಪ್ರದೇಶ – ತಲಾ ಶೇ 5.1, ಹರಿಯಾಣ– ಶೇ 4.6, ರಾಜಸ್ಥಾನ– ಶೇ 3.9, ಕೇರಳ, ಅಸ್ಸಾಂ– ತಲಾ ಶೇ 3.7 ಹಾಗೂ ಮಧ್ಯಪ್ರದೇಶದಲ್ಲಿ ದಾಖಲಾದ ಪ್ರಕರಣಗಳ ಪ್ರಮಾಣ ಶೇ 3.2ರಷ್ಟು ಎಂದು ಇವೇ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.