ADVERTISEMENT

ಸಾಲ ಬಾಧೆ: ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ಉದ್ಯಮಿ ಆತ್ಮಹತ್ಯೆ

ಪಿಟಿಐ
Published 16 ಜುಲೈ 2022, 2:58 IST
Last Updated 16 ಜುಲೈ 2022, 2:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉದ್ಯಮದಲ್ಲಿ ಆದ ಭಾರೀ ನಷ್ಟದಿಂದ ಮನನೊಂದ ಉದ್ಯಮಿಯೊಬ್ಬರು ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಮೃತ ಉದ್ಯಮಿಯನ್ನು 40 ವರ್ಷದ ಇಸ್ರಾರ್ ಅಹಮ್ಮದ್ ಎಂದು ಗುರುತಿಸಲಾಗಿದೆ. ಈಶಾನ್ಯ ದೆಹಲಿಯ ಜಫ್ರಾಬಾದ್‌ ಪ್ರದೇಶದ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ಧಾರೆ.

ಹೆಂಡತಿ ಮತ್ತು 8 ಹಾಗೂ 9 ವರ್ಷದ ಇಬ್ಬರು ಹೆಣ್ಣು ಮಕ್ಕಳಿಗೆ ಪ್ರಜ್ಞೆ ತಪ್ಪುವ ಔಷಧ ನೀಡಿ, ನಂತರ ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ADVERTISEMENT

ಅಹಮ್ಮದ್ ಪೋಷಕರು ಸಹ ಅದೇ ಕಟ್ಟಡದಲ್ಲಿ ವಾಸವಿದ್ದಾರೆ. ನಾಲ್ಕನೇ ಮಹಡಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.

ಅಹಮ್ಮದ್ ಮೊಬೈಲ್ ಫೋನ್‌ನಲ್ಲಿ ವಿಡಿಯೊ ಪತ್ತೆಯಾಗಿದ್ದು, ತೀವ್ರಆರ್ಥಿಕ ಸಂಕಷ್ಟ ಮತ್ತು ಸಾಲಬಾಧೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳಿಕೊಂಡಿದ್ಧಾರೆ.

4 ಮತ್ತು 13 ವರ್ಷದ ಇಬ್ಬರು ಗಂಡುಮಕ್ಕಳಿಗೆ ತಂದೆ ಏನೂ ಮಾಡಿಲ್ಲ.

ಇಸ್ರಾರ್ ಅಹಮ್ಮದ್ ಸ್ವಯಂಚಾಲಿತ ಪಿಸ್ತೂಲ್ ಬಳಸಿದ್ದು, ಪೊಲೀಸರು ಖಾಲಿ ಕಾಟ್ರಿಡ್ಜ್ ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.