ADVERTISEMENT

ವಿದ್ಯುತ್ ರಿಯಾಯಿತಿ ಯೋಜನೆಗೆ ದೆಹಲಿ ಸಚಿವ ಸಂಪುಟ ಅಸ್ತು

ಪಿಟಿಐ
Published 7 ಮಾರ್ಚ್ 2024, 12:51 IST
Last Updated 7 ಮಾರ್ಚ್ 2024, 12:51 IST
ಅತಿಶಿ ಮರ್ಲೆನಾ
ಅತಿಶಿ ಮರ್ಲೆನಾ   

ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ದೆಹಲಿ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ 2024–25ನೇ ಹಣಕಾಸು ವರ್ಷಕ್ಕೆ ವಿದ್ಯುತ್ ರಿಯಾಯಿತಿ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಇಂಧನ ಸಚಿವೆ ಅತಿಶಿ ತಿಳಿಸಿದ್ದಾರೆ.

ಈ ಭರವಸೆಯನ್ನು ಕಳೆದ 9 ವರ್ಷಗಳಿಂದ ಎಎಪಿ ಸರ್ಕಾರ ಈಡೇರಿಸುತ್ತಿದ್ದು, 22 ಲಕ್ಷ ಮನೆಗಳಿಗೆ ಶೂನ್ಯ ವಿದ್ಯುತ್ ಬಿಲ್ ಬರಲಿದೆ.

‘ನಮ್ಮ ಎದುರಾಳಿಗಳು ದೆಹಲಿ ಜನರಿಗೆ ಶೂನ್ಯ ವಿದ್ಯುತ್ ಬಿಲ್ ಸಿಗದಂತೆ ನೋಡಿಕೊಳ್ಳಲು ಯತ್ನಿಸಿದರು. ಅಧಿಕಾರಿಗಳು ಭಯ ಹುಟ್ಟಿಸಿದ್ದರೂ ಸಹ ಜನರಿಗೆ ಶೂಲ್ಯ ವಿದ್ಯುತ್ ನೀಡುವುದಕ್ಕೆ ಕೇಜ್ರಿವಾಲ್ ಬದ್ಧರಾಗಿದ್ದಾರೆ. ಸಚಿವ ಸಂಪುಟ ಸಭೆಯು 2025ರ ಮಾರ್ಚ್ 31ರವರೆಗೆ ವಿದ್ಯುತ್ ರಿಯಾಯಿತಿ ಯೋಜನೆಗೆ ಅನುಮೋದನೆ ನೀಡಿದೆ’ಎಂದು ಅವರು ಹೇಳಿದ್ದಾರೆ.

ADVERTISEMENT

ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತಿರುವ ದೆಹಲಿ ದರ್ಕಾರವು, 201ರಿಂದ 400 ಯೂನಿಟ್ ಬಳಸುವವರಿಗೆ ವಿದ್ಯುತ್ ದರದಲ್ಲಿ ಶೇ 50ರಷ್ಟು ಸಮ್ಸಿಡಿ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.