ADVERTISEMENT

ದೆಹಲಿ ಚಲೊ | ರೈತರನ್ನು ತಡೆಯಲು ಪೊಲೀಸ್‌ ಬಲ ಪ್ರಯೋಗ

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಪಂಜಾಬ್‌, ರಾಜಸ್ಥಾನ, ಉತ್ತರಪ್ರದೇಶ, ಕೇರಳ ರೈತರು ಶುಕ್ರವಾರ ಧರಣಿ ನಡೆಸಲು ದೆಹಲಿಗೆ ತೆರಳುತ್ತಿದ್ದು ಅವರನ್ನು ಹರಿಯಾಣ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. ಇಲ್ಲಿನ ಕರ್ಣ ಸರೋವರ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ರೈತರು ಜಮಾವಣೆಗೊಂಡಿದ್ದಾರೆ. ಇದರ ಕ್ಷಣ ಕ್ಷಣದ ಅಪ್ಡೇಟ್‌ ಇಲ್ಲಿದೆ...

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 12:42 IST
Last Updated 26 ನವೆಂಬರ್ 2020, 12:42 IST

ರೈತರ ಹಿಮ್ಮೆಟ್ಟಿಸಲು ಜಲಫಿರಂಗಿ, ಅಶ್ರುವಾಯು

ರೈತ ಹೋರಾಟ: ದೆಲಹಿ-ಗುರುಗ್ರಾಮ ಗಡಿಯಲ್ಲಿ ವಾಹನ ದಟ್ಟಣೆ

ರೈತರ  ಜಾಥಾ ಹಿನ್ನೆಲೆಯಲ್ಲಿ ದೆಹಲಿ-ಗುರುಗ್ರಾಮ ಗಡಿಯಲ್ಲಿ ವಾಹನ ದಟ್ಟಣೆ ಸೃಷ್ಟಿಯಾಗಿರುವುದು 

ಪೊಲೀಸ್‌ ಬಲ ಪ್ರಯೋಗ: ದೇವೇಗೌಡ ಆಕ್ರೋಶ

ದೆಹಲಿ ರೈತ ಚಳವಳಿಯ ಚಿತ್ರಗಳನ್ನು ನೋಡಿ ಬೇಸರವಾಗಿದೆ. ರೈತರನ್ನು ಗೌರವದಿಂದ ಕಾಣುವಂತೆ ಕೇಂದ್ರ ಸರ್ಕಾರವನ್ನು ಕೋರುತ್ತೇನೆ. ದಯವಿಟ್ಟು ಅವರೊಂದಿಗೆ ಮಾತನಾಡಿ. ಅವರ ಮಾತುಗಳನ್ನು ಕೇಳಿ. ಪೊಲೀಸ್ ಪಡೆ ಸಮಸ್ಯೆಯನ್ನು ಪರಿಹರಿಸದು 

ದೆಹಲಿ-ಹರಿಯಾಣ ಗಡಿಯಲ್ಲಿ ಬಿಗಿ ಭದ್ರತೆ: ರೈತರ ಜಾಥಾ ಮೇಲೆ ನಿಗಾ ಇಡಲು ಡ್ರೋಣ್‌ ಕ್ಯಾಮೆರಾಗಳ ಬಳಕೆ

ಅಂಬಲಾದ ಸೋದ್‌ಪುರ ಗಡಿಯಲ್ಲಿ ಪೊಲೀಸರು ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಿದರು

ರೈತರ ಶಾಂತಿಯುತ ಪ್ರತಿಭಟನೆ ಹತ್ತಿಕ್ಕುವುದು ಸರಿಯಲ್ಲ –ಕೇಜ್ರಿವಾಲ್‌

ಕರ್ಣ ಸರೋವರ ಸೇತುವೆ ಮೇಲೆ ನೆರೆದಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದರು

ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ, ಜಲಫಿರಂಗಿಗಳನ್ನು ಬಳಸಲಾಗಿದೆ, ಸಂವಿಧಾನ ದಿನಾಚರಣೆ ದಿನವಾದ ಇಂದು ರೈತರು ತಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಕೇಳಲು ದೆಹಲಿಗೆ ಬರುತ್ತಿದ್ದಾರೆ. ಅವರನ್ನು ತಡೆಯಬೇಡಿ ಎಂದು ಯೋಗೇಂದ್ರ ಯಾದವ್‌ ಟ್ವೀಟ್‌ ಮಾಡಿದ್ದಾರೆ.

ಹರಿಯಾಣದ ಗಡಿಯಲ್ಲಿ ಸಾವಿರಾರು ಜನ ರೈತರು ದೆಹಲಿಗೆ ತೆರಳಲು ಕರ್ನಾಲ್ ನ ಕರ್ಣ ಸರೋವರ ಪ್ರದೇಶದ ಬಳಿ ಜಮಾಯಿಸಿದ್ದಾರೆ

ಜಲಫಿರಂಗಿ, ಅಶ್ರುವಾಯು ಪ್ರಯೋಗ

ಹರಿಯಾಣ ಗಡಿಯಲ್ಲಿ ರೈತರ ಮೇಲೆ ಪೊಲೀಸರಿಂದ ಜಲಫಿರಂಗಿ ಪ್ರಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT