ದೆಹಲಿ ಮೆಟ್ರೊ
ನವದೆಹಲಿ: 2024 ಜನವರಿಯಿಂದ ಇಲ್ಲಿಯವರೆಗೆ ದೆಹಲಿ ಮೆಟ್ರೊದಲ್ಲಿ ಸುಮಾರು 3,952 ಕಳ್ಳತನ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸ್ ಇಲಾಖೆಯ ದತ್ತಾಂಶಗಳು ತಿಳಿಸಿವೆ.
ಕಳೆದ ವರ್ಷ ಸೆಪ್ಟೆಂಬರ್ 8ರವರೆಗೆ ಸುಮಾರು 3,709 ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಇದಕ್ಕೆ ಹೋಲಿಸಿದರೆ ಈ ವರ್ಷ ಕಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ವರದಿಯಾದ ಪ್ರಕರಣಗಳಲ್ಲಿ ಕಿಸೆಕಳ್ಳತನ, ಮೊಬೈಲ್ ಮತ್ತು ಬೆಲೆಬಾಳುವ ವಸ್ತಗಳ ಕಳ್ಳತನ ಪ್ರಕರಣಗಳು ಸೇರಿವೆ ಎಂದು ತಿಳಿಸಿವೆ.
ಸುದ್ದಿಸಂಸ್ಥೆ ಪಿಟಿಐಗೆ ದೊರೆತ ಮಾಹಿತಿ ಪ್ರಕಾರ, ಒಟ್ಟು 3,952 ಪ್ರಕರಣಗಳಲ್ಲಿ ಕನಿಷ್ಠ 3,898 ಕಳ್ಳತನ ಪ್ರಕರಣಗಳು ಇ-ಎಫ್‌ಐಆರ್‌ಗಳ ಮೂಲಕ ದಾಖಲಾಗಿವೆ. ಅವುಗಳಲ್ಲಿ 548 ಪ್ರಕರಣಗಳನ್ನು ಈ ವರ್ಷ ಸೆಪ್ಟೆಂಬರ್ 8ರ ಒಳಗೆ ಪರಿಹರಿಸಲಾಗಿದೆ.
ಈ ವರ್ಷ ಸೆಪ್ಟೆಂಬರ್ 8 ರವರೆಗೆ ಕನಿಷ್ಠ 81 ಮೋಟಾರು ವಾಹನ ಕಳ್ಳತನ ಪ್ರಕರಣಗಳು, ಐದು ದರೋಡೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 72 ಮೋಟಾರು ವಾಹನ ಕಳ್ಳತನ ಪ್ರಕರಣಗಳು, 1 ದರೋಡೆ ಪ್ರಕರಣ ವರದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.