ADVERTISEMENT

ದೆಹಲಿ: ಹಳದಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಪುನರಾರಂಭ

ಪಿಟಿಐ
Published 7 ಸೆಪ್ಟೆಂಬರ್ 2020, 6:03 IST
Last Updated 7 ಸೆಪ್ಟೆಂಬರ್ 2020, 6:03 IST
ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಣಿಕರ ತಪಾಸಣೆ
ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಣಿಕರ ತಪಾಸಣೆ   

ನವದೆಹಲಿ: ಕೋವಿಡ್‌–19ನಿಂದಾಗಿ ಐದು ತಿಂಗಳ ಕಾಲ ಸ್ಥಗಿತಗೊಂಡಿದ್ದ ದೆಹಲಿ ಮೆಟ್ರೊ ಸೇವೆಯು ಹಳದಿ ಮಾರ್ಗದಲ್ಲಿ ಸೋಮವಾರ ಪುನರಾರಂಭವಾಗಿದೆ.

‘ಇದಕ್ಕೆ ಬೇಕಾದ ಎಲ್ಲಾ ಸುರಕ್ಷತಾ ಮಾನದಂಡಗಳನ್ನುದೆಹಲಿ ಮೆಟ್ರೊ ರೈಲು ಕಾರ್ಪೊರೆಷನ್‌ (ಡಿಎಂಆರ್‌ಸಿ) ತೆಗೆದುಕೊಂಡಿದೆ. ಮೆಟ್ರೊ ರೈಲುಗಳುಬೆಳಿಗ್ಗೆ 7-11 ಗಂಟೆ, ಸಂಜೆ 4–8 ಗಂಟೆಯವರೆಗೆ ನಾಲ್ಕು ಗಂಟೆಗಳ ಹಂತಗಳಲ್ಲಿ ಕಾರ್ಯನಿರ್ವಹಿಸಲಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು, ಮೆಟ್ರೊ ಸೇವೆಗಳನ್ನು ಪುನರಾರಂಭವಾಗಿರುವುದು ಬಹಳ ಸಂತೋಷದ ಸಂಗತಿ. ಡಿಎಂಆರ್‌ಸಿ ಒಳ್ಳೆಯ ಸುರಕ್ಷತಾ ವ್ಯವಸ್ಥೆಯನ್ನು ಮಾಡಿದೆ. ಪ್ರಯಾಣಿಕರು ಕೂಡ ಮೆಟ್ರೊದಲ್ಲಿ ಪ್ರಯಣಿಸುವಾಗ ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸುವಲ್ಲಿ ಯಾವುದೇ ನಿರ್ಲಕ್ಷ್ಯವನ್ನು ತೋರಬಾರದು ಎಂದಿದ್ದಾರೆ.

ADVERTISEMENT

‘ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಕೆಲವು ನಿರ್ಬಂಧಗಳೊಂದಿಗೆ ಮೆಟ್ರೊ ಸಂಚಾರವನ್ನು ಆರಂಭಿಸಲಾಗಿದ್ದು, ದೆಹಲಿಯ ಮೊದಲ ರೈಲು ಬೆಳಿಗ್ಗೆ 7 ಗಂಟೆಗೆ ಸಮಯಪುರ ಬದ್ಲಿ ನಿಲ್ದಾಣದಿಂದ ಹೂಡ ಸಿಟಿ ಸೆಂಟರ್‌ ಸ್ಟೇಷನ್‌ಗೆ ಚಲಿಸಿದೆ’ ಎಂದು ಡಿಎಂಆರ್‌ಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಸಂಬಂಧ ಟ್ವೀಟ್‌ ಮಾಡಿರುವ ಡಿಎಂಆರ್‌ಸಿ, ‘ 169 ದಿನಗಳ ಬಳಿಕ ನಾವು ನಿಮ್ಮನ್ನು ನೋಡುತ್ತಿದ್ದೇವೆ. ಅವಶ್ಯಕತೆ ಇದ್ದಲ್ಲಿ ಮಾತ್ರ‍ಪ್ರಯಣಿಸಿ ಎಂದು ಮನವಿ ಮಾಡಿದೆ. ಇದರೊಂದಿಗೆ ಹೂಡ ಸಿಟಿ ಸ್ಟೇಷನ್‌ಗೆ ಆಗಮಿಸಿದ ರೈಲಿನ ವಿಡಿಯೊದ ತುಣಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಹಳದಿ ಮಾರ್ಗದಲ್ಲಿ ಯಾವುದೇಕಂಟೈನ್‌ಮೆಂಟ್‌ ಪ್ರದೇಶಗಳಿಲ್ಲದ ಕಾರಣ ಈ ಮಾರ್ಗದ ಎಲ್ಲಾ ನಿಲ್ಧಾಣ‌ಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೆಟ್ರೊ ಪ್ರಯಣದ ವೇಳೆ ಮುಖಗವಸು ಧರಿಸುವುದು ಕಡ್ಡಾಯ, ಕೈಗಳನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿ, ಥರ್ಮಲ್‌ ಸ್ಕ್ಯಾನರ್‌ ಮುಖಾಂತರ ಪ್ರಯಾಣಿಕರ ದೇಹದ ಉಷ್ಣಾಂಶ ಪರಿಶೀಲಿಸಿದ ಬಳಿಕವೇ ಪ್ರಯಾಣಿಕರುನಿಲ್ಧಾಣದ ಆವರಣ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.