ADVERTISEMENT

18ರ ವಯಸ್ಸಿನ ದರೋಡೆಕೋರಿರುವ ‘ಸುನೀಲ್ ಗುಪ್ತಾ ಗ್ಯಾಂಗ್’ ಬಂಧಿಸಿದ ದೆಹಲಿ ಪೊಲೀಸ್

ಪಿಟಿಐ
Published 15 ಫೆಬ್ರುವರಿ 2025, 9:50 IST
Last Updated 15 ಫೆಬ್ರುವರಿ 2025, 9:50 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ದರೋಡೆಗೆ ಸಿದ್ಧತೆ ನಡೆಸಿದ್ದ 18ರ ವಯೋಮಾನದವರನ್ನೇ ಹೊಂದಿದ್ದ ‘ಸುನೀಲ್ ಗುಪ್ತಾ ಗ್ಯಾಂಗ್‌’ ಅನ್ನು ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯ ಸ್ವರೂಪ ನಗರ ಪ್ರದೇಶದಲ್ಲಿ ವಶಕ್ಕೆ ಪಡೆದಿದ್ದಾರೆ.

ADVERTISEMENT

ಅಲ್ತಮಾಶ್ ಅಲಿಯಾಸ್ ಅಮಿತ್ ಎಂಬಾತನಿಂದ ದೇಶಿ ನಿರ್ಮಿತ ಬಂದೂಕು ಹಾಗೂ ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಖಚಿತ ಮಾಹಿತಿ ಮೇರೆಗೆ ಸ್ವರೂಪ ನಗರದಲ್ಲಿ ಗಸ್ತು ಹಾಕಲಾಗಿತ್ತು. ಫೆ. 12 ಹಾಗೂ 13ರಂದು ಅಲ್ತಮಾಶ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಉತ್ತರ ಹೊರವಲಯದ ಡಿಸಿಪಿ ನಿಧಿನ್ ವಾಲ್ಸನ್‌ ತಿಳಿಸಿದ್ದಾರೆ.

‘ಸನ್ನಿ ಎಂಬಾತ ತನಗೆ ಬಂದೂಕು ನೀಡಿದ್ದ. ಗ್ಯಾಂಗ್‌ನಲ್ಲಿ 18ರ ವಯೋಮಾನದವರನ್ನೇ ಸೇರಿಸಿಕೊಳ್ಳುವ ನಿರ್ದೇಶನವೂ ಈತನಿಂದಲೇ ಬಂದಿತ್ತು. ಬಂದೂಕು ಹಿಡಿದು ಸಣ್ಣ ಪ್ರಮಾಣದ ದರೋಡೆ ಹಾಗೂ ಕಳ್ಳತನ ನಡೆಸಲು ಸನ್ನಿ ಹೇಳುತ್ತಿದ್ದ ಎಂಬ ಅಂಶವನ್ನು ಅಲ್ತಮಾಶ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.