ADVERTISEMENT

ಕೋವಿಡ್‌: ದೆಹಲಿಯಲ್ಲಿ ಇಂದು ಶೂನ್ಯ ಸಾವು

ಪಿಟಿಐ
Published 24 ಜುಲೈ 2021, 16:55 IST
Last Updated 24 ಜುಲೈ 2021, 16:55 IST
ನವದೆಹಲಿ: ಪಿಟಿಐ ಚಿತ್ರ
ನವದೆಹಲಿ: ಪಿಟಿಐ ಚಿತ್ರ   

ನವದೆಹಲಿ: ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಿಂದ ಸುದ್ದಿಯಾಗಿದ್ದ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಕೋವಿಡ್‌ನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. 66 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಕೋವಿಡ್ ದೃಢ ಪ್ರಮಾಣ ಶೇ. 0.09 ರಷ್ಟಿದೆ.

ರಾಷ್ಟ್ರ ರಾಜಧಾನಿಯಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆ ಆರಂಭವಾದ ನಂತರ ಇದು ಎರಡನೇ ಬಾರಿಗೆ ಒಂದು ದಿನದಲ್ಲಿ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ.

ಜುಲೈ18 ರಂದು ಯಾವುದೇ ಸಾವು ದಾಖಲಾಗಿಲ್ಲ, ಅಂದು 51 ಪ್ರಕರಣಗಳು ದಾಖಲಾಗಿದ್ದವು.

ADVERTISEMENT

ಈ ವರ್ಷದ ಮಾರ್ಚ್ 2ರಂದು ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಸಾವು ವರದಿಯಾಗಿರಲಿಲ್ಲ. ಆ ದಿನ, ಏಕದಿನದ ಸೋಂಕುಗಳ ಸಂಖ್ಯೆ 217 ಮತ್ತು ಪಾಸಿಟಿವ್ ದರವು ಶೇಕಡಾ 0.33 ರಷ್ಟಿತ್ತು.

ಏಪ್ರಿಲ್-ಮೇ ಅವಧಿಯಲ್ಲಿ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ನಗರ ತತ್ತರಿಸಿಹೋಗಿತ್ತು.

ಶುಕ್ರವಾರ, ನಗರದಲ್ಲಿ 58 ಕೋವಿಡ್ ಪ್ರಕರಣಗಳು ಮತ್ತು ಒಂದು ಸಾವು ಸಂಭವಿಸಿದ್ದು, ಕೋವಿಡ್ ಪಾಸಿಟಿವ್ ದರವು ಶೇಕಡಾ 0.09 ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.