ADVERTISEMENT

ನವದೆಹಲಿ: ಮೂರನೇ ದಿನವೂ ವಾಯು ಗುಣಮಟ್ಟ ಕಳಪೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 12:33 IST
Last Updated 12 ಡಿಸೆಂಬರ್ 2018, 12:33 IST
   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸತತ ಮೂರನೇ ದಿನವೂವಾಯು ಗುಣಮಟ್ಟ ಕಳಪೆಯಾಗಿತ್ತು. ವಾಯು ಗುಣಮಟ್ಟಸೂಚ್ಯಂಕದಲ್ಲಿ ಬುಧವಾರ (ಎಕ್ಯೂಐ) 413 ಅಂಶ ದಾಖಲಾಗಿದೆ.

ಆರೋಗ್ಯವಂತ ಜನರೂ ಉಸಿರಾಡಲು ಕಷ್ಟಪಡುವ ಸ್ಥಿತಿ ಇದೆ ಎಂದು ತಜ್ಞರು ಹೇಳಿದ್ದಾರೆ. ಪಕ್ಕದ ಗಾಜಿಯಾಬಾದ್ (429 ಅಂಶ) ಹಾಗೂ ನೊಯಿಡಾ, ಹಾಗೂ ಫರೀಬಾದಾದ್‌ನಲ್ಲಿ ವಾಯುಗುಣಾಂಕ ತೀರಾ ಕಳಪೆ ಎನಿಸಿದೆ.

28 ವರ್ಷಗಳಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರ ಸ್ಥಿತಿಗೆ ತಲುಪಿದೆ. ರೋಹಿಣಿ, ಬವಾನಾ, ಅಶೋಕ್ ವಿಹಾರ್ ಮತ್ತು ವಾಜೀಪುರ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.