ನವದೆಹಲಿ: ‘ಸ್ವಾತಂತ್ರ್ಯ ವಿರೋಧಿ ಶಕ್ತಿಗಳು ಅಧಿಕಾರವನ್ನು ಅಕ್ರಮವಾಗಿ ಕಿತ್ತುಕೊಂಡಿದ್ದು, ಜಾತ್ಯತೀತ ಸಂಸ್ಕೃತಿಯನ್ನು ನಾಶಗೊಳಿಸಲು ಸಕ್ರಿಯವಾಗಿ ಯತ್ನಿಸುತ್ತಿವೆ. ಜನರು, ಇಂತಹ ಆಕ್ರಮಣಕಾರರನ್ನು ಕಿತ್ತೊಗೆಯಬೇಕು’ ಎಂದು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಕರೆ ನೀಡಿದ್ದಾರೆ.
ಬಂಗಾಳದ ಹೊಸ ವರ್ಷ ‘ಪೊಹೆಲಾ ಬೊಯಿಶಾಕ್’ಗೆ ಶುಭಾಶಯ ತಿಳಿಸಿ ಸಂದೇಶ ಪ್ರಕಟಿಸಿರುವ ಅವರು, ‘ಸ್ವಾತಂತ್ರ್ಯ ವಿರೋಧಿ ಶಕ್ತಿಗಳು ಈ ಹಿಂದೆಯೂ ದೇಶದ ಚುಕ್ಕಾಣಿ ಹಿಡಿದ ವೇಳೆ ದೇಶದ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿ ಮೇಲೆ ದಾಳಿ ನಡೆಸಿದ್ದಾರೆ. ಈಗ, ಅವರು ಮಂಗಳ್ ಶೋಭಾಯಾತ್ರೆಯನ್ನು ತಡೆಯಲು ಯತ್ನಿಸುತ್ತಿದ್ದು, ಅದರ ಹೆಸರು ಬದಲಾಯಿಸಲು ಹೊರಟಿದ್ದಾರೆ’ ಎಂದು ಆರೋಪಿಸಿದರು.
‘ದೇಶದ ಶತ್ರುಗಳು ಬಾಂಗ್ಲಾದೇಶವನ್ನು ಮುನ್ನಡೆಸುತ್ತಿದ್ದು, ಸಂಸ್ಕೃತಿಯ ಶತ್ರುಗಳು ಆಗಿದ್ದಾರೆ’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.