ADVERTISEMENT

ಹಲವು ಲೋಪ: ಸ್ಪೈಸ್‌ ಜೆಟ್‌ ಶೇ 50 ವಿಮಾನಗಳಿಗೆ ಮಾತ್ರ ಅನುಮತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 15:42 IST
Last Updated 27 ಜುಲೈ 2022, 15:42 IST
 ಸ್ಪೈಸ್‌ ಜೆಟ್‌
ಸ್ಪೈಸ್‌ ಜೆಟ್‌    

ನವದೆಹಲಿ (ಪಿಟಿಐ): ಸ್ಪೈಸ್‌ ಜೆಟ್‌ನ ಗರಿಷ್ಠ ಶೇ 50ರಷ್ಟು ವಿಮಾನಗಳಿಗೆ ಮಾತ್ರ ಬೇಸಿಗೆ ವೇಳಾಪಟ್ಟಿಯಲ್ಲಿ ಎಂಟು ವಾರ ಸಂಚಾರ ಸೇವೆ ಒದಗಿಸಲು ಅನುಮತಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬುಧವಾರ ಆದೇಶ ಹೊರಡಿಸಿದೆ.

ಈ ವಿಮಾನಗಳ ಸೇವೆಯಲ್ಲಿ ಇತ್ತೀಚೆಗೆ ಕೆಲವು ಲೋಪದೋಷಗಳು ಕಾಣಿಸಿದ ಕಾರಣ, ಬೇಸಿಗೆ ವೇಳಾಪಟ್ಟಿಯಲ್ಲಿ ಆ ಸಂಸ್ಥೆಗೆ ನೀಡಿದ್ದ ಅನುಮತಿಗೆ ಮಾರ್ಪಾಡು ಮಾಡಿ, ವಿಮಾನಗಳ ಸಂಚಾರ ಸೇವೆಯಲ್ಲಿ ಕಡಿತಗೊಳಿಸಲಾಗಿದೆ.

ಜೂನ್‌ 19ರಿಂದ ಸ್ಪೈಸ್‌ ಜೆಟ್‌ ವಿಮಾನಗಳಲ್ಲಿ ಕನಿಷ್ಠ ಎಂಟು ಬಾರಿತಾಂತ್ರಿಕ ದೋಷಗಳು ಕಾಣಿಸಿಕೊಂಡು, ತುರ್ತು ಭೂಸ್ಪರ್ಶದ ಘಟನೆಗಳು ನಡೆದಿದ್ದವು. ಇದರಿಂದಾಗಿ ಜುಲೈ 6ರಂದು ಡಿಜಿಸಿಎ ಕಾರಣ ಕೇಳಿ ವಿಮಾನಯಾನ ಸಂಸ್ಥೆಗೆ ನೋಟಿಸ್‌ ನೀಡಿತ್ತು.

ADVERTISEMENT

‘ನೋಟಿಸ್‌ಗೆ ಸ್ಪೈಸ್‌ ಜೆಟ್‌ ನೀಡಿರುವ ಉತ್ತರ, ಸ್ಥಳ ಪರಿಶೀಲನೆ, ವಿಮಾನ ಹಾರಾಟ ಪರಿವೀಕ್ಷಣೆ ಪರಿಶೀಲಿಸಿದ ನಂತರ,ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಚಾರ ಸೇವೆ ಮುಂದುವರಿಕೆಗೆ ಸ್ಪೈಸ್ ಜೆಟ್ ವಿಮಾನಗಳ ನಿರ್ಗಮನಗಳ ಸಂಖ್ಯೆಯನ್ನು ಬೇಸಿಗೆಯ ವೇಳಾಪಟ್ಟಿಗೆ ಶೇಕಡಾ 50ರಷ್ಟಕ್ಕೆ ಸೀಮಿತಗೊಳಿಸಲಾಗಿದೆ’ ಎಂದು ಡಿಜಿಸಿಎ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.