ADVERTISEMENT

ಹೆಲಿಕಾಪ್ಟರ್ ಪತನ ಪ್ರಕರಣ: ಒಬ್ಬ ಪೈಲಟ್‌ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 16:27 IST
Last Updated 15 ಆಗಸ್ಟ್ 2021, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಜಮ್ಮುವಿನ ಗಡಿಭಾಗದ ರಾಜ್‌ನೀತ್‌ ಸಾಗರ್‌ ಅಣೆಕಟ್ಟೆಯಲ್ಲಿ ಪತನಗೊಂಡಿದ್ದ ಸೇನೆಯ ಹೆಲಿಕಾಪ್ಟರ್‌ನ ಪೈಲಟ್ ಒಬ್ಬರ ಶವ ಅಪಘಾತವಾದ 12 ದಿನದ ನಂತರ ಭಾನುವಾರ ಪತ್ತೆಯಾಗಿದೆ. ಇನ್ನೊಬ್ಬ ಪೈಲಟ್‌ ಪತ್ತೆ ಶೋಧ ಮುಂದುವರಿದಿದೆ.

ಲೆಫ್ಟಿನಂಟ್ ಕರ್ನಲ್‌ ಎ.ಎಸ್.ಬಾತ್ ಅವರ ಶವವು ಅಣೆಕಟ್ಟೆಯ 75.9 ಮೀಟರ್‌ ಆಳದಲ್ಲಿ ಪತ್ತೆಯಾಯಿತು ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ಪೈಲಟ್‌ಗಳಿದ್ದ ಹೆಲಿಕಾಪ್ಟರ್ ಆ. 3ರಂದು ಅಣೆಕಟ್ಟೆಯಲ್ಲಿ ಪತನಗೊಂಡಿತ್ತು.

ನಾಪತ್ತೆಯಾಗಿದ್ದ ಪೈಲಟ್‌ಗಳ ಪತ್ತೆಗೆ ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ರಾಜ್ಯ ಪೊಲೀಸ್‌ ಪಡೆಯ ಸಿಬ್ಬಂದಿ ಜಂಟಿಯಾಗಿ ಸುಮಾರು 500 ಅಡಿ ಆಳದ ಅಣೆಕಟ್ಟೆಯಲ್ಲಿ ಶೋಧ ಕಾರ್ಯ ಕೈಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.