ADVERTISEMENT

ಒಳನುಸುಳುವಿಕೆ, ಕಳ್ಳಸಾಗಣೆ ತಡೆಯುವುದು ಕಷ್ಟ: ಅಮಿತ್‌ ಶಾ 

ಪಿಟಿಐ
Published 5 ಮೇ 2022, 15:39 IST
Last Updated 5 ಮೇ 2022, 15:39 IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ   

ಕೋಲ್ಕತ್ತಾ: ‘ಸ್ಥಳೀಯ ಆಡಳಿತದ ಬೆಂಬಲವಿಲ್ಲದೆ ಒಳನುಸುಳುವಿಕೆ ಹಾಗೂ ಕಳ್ಳಸಾಗಣೆ ತಡೆಯುವುದು ಕಷ್ಟ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾಹೇಳಿದರು.

ಉತ್ತರ24 ಪರಗಣ ಜಿಲ್ಲೆಯಲ್ಲಿ ಬಿಎಸ್‌ಎಫ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಗಡಿಗಳು ಅಭೇಧ್ಯವಾಗಿರುವಂತೆ ಬಿಎಸ್‌ಎಫ್‌ ಯೋಧರು ನೋಡಿಕೊಳ್ಳಬೇಕು. ಗಡಿಗಳ ರಕ್ಷಣೆ ಅವರ ಸಾಂವಿಧಾನಿಕ ಹಕ್ಕು. ಸ್ಥಳೀಯ ಬೆಂಬಲವಿಲ್ಲದೇ ಒಳನುಸುಳುವಿಕೆ ಹಾಗೂ ಕಳ್ಳಸಾಗಣೆಯನ್ನು ತಡೆಯುವುದು ಕಷ್ಟ. ಸಾರ್ವಜನಿಕರ ಒತ್ತಡದಿಂದಾಗಿ, ಸ್ಥಳೀಯ ಅಧಿಕಾರಿಗಳು ಬಲವಂತವಾಗಿ ಸಹಾಯ ಮಾಡುವಂತೆ ನೀಡುವ ರಾಜಕೀಯ ಪರಿಸ್ಥಿತಿ ಶೀಘ್ರದಲ್ಲೇ ಬರಬಹುದು’ ಎಂದು ಹೇಳಿದರು.

ಅಮಿತ್‌ ಶಾ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್‌, ಗಡಿಗಳನ್ನು ರಕ್ಷಿಸುವುದು ಬಿಎಸ್‌ಎಫ್‌ ಕರ್ತವ್ಯ. ಅಮಿತ್‌ ಶಾಇತರರ ಮೇಲೆ ಜವಾಬ್ದಾರಿಯನ್ನು ಹಾಕಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಆಡಳಿತವು ಯೋಧರಿಗೆ ಎಲ್ಲ ಬೆಂಬಲ ನೀಡುತ್ತಿದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.