ADVERTISEMENT

96ನೇ ಹುಟ್ಟುಹಬ್ಬ ಆಚರಿಸಿದ ದಿಲೀಪ್‌ ಕುಮಾರ್‌

ಪಿಟಿಐ
Published 11 ಡಿಸೆಂಬರ್ 2018, 18:11 IST
Last Updated 11 ಡಿಸೆಂಬರ್ 2018, 18:11 IST
ದಿಲೀಪ್‌ ಕುಮಾರ್‌
ದಿಲೀಪ್‌ ಕುಮಾರ್‌   

ಮುಂಬೈ: ಬಾಲಿವುಡ್‌ ನಟ ದಿಲೀಪ್‌ ಕುಮಾರ್‌ ಅವರು ಮಂಗಳವಾರ 96ನೇ ವರ್ಷಕ್ಕೆ ಕಾಲಿಟ್ಟಿದ್ದು, ಕುಟುಂಬಸ್ಥರು ಮತ್ತು ಆಪ್ತಸ್ನೇಹಿತರ ನಡುವೆ ಹುಟ್ಟುಹಬ್ಬವನ್ನು ಆಚರಿಸಲಾಯಿತು ಎಂದು ಅವರ ಪತ್ನಿ ಸೈರಾ ಭಾನು ತಿಳಿಸಿದರು.

’ಕಳೆದ ಕೆಲವು ವರ್ಷಗಳಿಂದ ದಿಲೀಪ್‌ ಕುಮಾರ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಕಾರಣದಿಂದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಯೋಚನೆಯಿಲ್ಲ‘ ಎಂದರು.

’ಕೇವಲ ಆಪ್ತರ ಜೊತೆ ಹುಟ್ಟುಹಬ್ಬ ಆಚರಿಸಲಾಗಿದೆ. ಅವರು ನನ್ನ ಪಾಲಿನ ಕೊಹಿನೂರ್‌ ಇದ್ದಂತೆ, ನನಗೆ ಸಿಕ್ಕ ಅತ್ಯಂತ ಅಮೂಲ್ಯವಾದ ಉಡುಗೊರೆ‘ ಎಂದು ಬಣ್ಣಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.