ADVERTISEMENT

ಆದಾಯಕ್ಕಿಂತ ಅಧಿಕ ಆಸ್ತಿ ಪ್ರಕರಣ: ಸಚಿನ್ ವಾಝೆ ವಿರುದ್ಧ ಎಸಿಬಿ ತನಿಖೆ ಆರಂಭ

ಪಿಟಿಐ
Published 25 ಜೂನ್ 2021, 7:38 IST
Last Updated 25 ಜೂನ್ 2021, 7:38 IST
ಸಚಿನ್ ವಾಝೆ
ಸಚಿನ್ ವಾಝೆ   

ಮುಂಬೈ: ಉದ್ಯಮಿ ಮನ್‌ಸುಖ್‌ ಹಿರೇನ್ ಸಾವಿನ ಪ್ರಕರಣದಲ್ಲಿ ವಜಾಗೊಂಡಿರುವ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರ ವಿರುದ್ಧ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಆರೋಪದ ಕುರಿತು ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ (ಎಬಿಸಿ) ಬಹಿರಂಗ ತನಿಖೆ ಆರಂಭಿಸಿದೆ.

ವಾಝೆ ಅವರು ಪೊಲೀಸ್ ಕರ್ತವ್ಯದಿಂದ ವಜಾಗೊಳಿಸಿರುವ ಹಿನ್ನೆಲೆಯಲ್ಲಿ, ಭ್ರಷ್ಟಾಚಾರ ನಿಗ್ರಹ ದಳದ ಮಹಾನಿರ್ದೇಶನಾಲಯದ ಆದೇಶದ ಮೇರೆಗೆ ಈ ಬಹಿರಂಗ ವಿಚಾರಣೆ ಆರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ತನಿಖೆ ವೇಳೆ ವಾಝೆ ಅವರ ಸ್ಥಿರ ಮತ್ತು ಚರ ಆಸ್ತಿಗಳು ಮತ್ತು ಅವರ ಸಂಪತ್ತಿನ ಮೂಲಗಳನ್ನು ಎಸಿಬಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ‘ ಎಂದು ಅವರು ಹೇಳಿದರು.

ADVERTISEMENT

ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ವಾಹನವೊಂದರಲ್ಲಿ ಸ್ಪೋಟಕಗಳನ್ನಿರಿಸಿದ್ದ ಪ್ರಕರಣದಲ್ಲಿ ಸಚಿನ್ ವಾಝೆ ಅವರ ಪಾತ್ರವಿದೆ ಎಂಬ ಆರೋಪದ ಮೇಲೆ, ಇದೇ ಮಾರ್ಚ್‌ ತಿಂಗಳಲ್ಲಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. ನಂತರ ಪೊಲೀಸ್ ಸೇವೆಯಿಂದ ವಾಝೆ ಅವರನ್ನು ವಜಾಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.