ADVERTISEMENT

ಡಿಎಂಕೆ ಮುಂದಿನ ಸರ್ಕಾರ ರಚಿಸುವ ಸಾಧ್ಯತೆ: ತಂತಿ ಟಿವಿ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 18:15 IST
Last Updated 3 ಏಪ್ರಿಲ್ 2021, 18:15 IST

ಚೆನ್ನೈ:ಡಿಎಂಕೆ ನೇತೃತ್ವದ ಮೈತ್ರಿಕೂಟವು ತಮಿಳುನಾಡಿನಲ್ಲಿ ಮುಂದಿನ ಸರ್ಕಾರ ರಚಿಸುವ ಸಾಧ್ಯತೆಯಿದೆ ಎಂದು ತಂತಿ ಟಿ.ವಿ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಡಿಎಂಕೆ ಮೈತ್ರಿಕೂಟಕ್ಕೆ 124 ಸ್ಥಾನ ಹಾಗೂ ಎಐಎಡಿಎಂಕೆ ಮೈತ್ರಿಕೂಟಕ್ಕೆ 52 ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷೆ ಹೇಳಿದೆ. ಆದರೆ, ತೀವ್ರ ಸ್ಪರ್ಧೆ ಇರುವ 58 ಕ್ಷೇತ್ರಗಳಲ್ಲಿ ಯಾರಿಗೆ ಜಯ ಲಭಿಸಲಿದೆ ಎಂಬುದನ್ನು ತಿಳಿಸಿಲ್ಲ.

ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಮುಖ್ಯಮಂತ್ರಿ ಹುದ್ದೆಗೆ ನೆಚ್ಚಿನ ಆಯ್ಕೆಯಾಗಿದ್ದು, ಅವರು ಶೇ 45ರಷ್ಟು ಮತ್ತು ಹಾಲಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಶೇ 40ರಷ್ಟು ಮತ ಪಡೆದಿದ್ದಾರೆ.

ADVERTISEMENT

ಚೆನ್ನೈನ ದಕ್ಷಿಣ ಹಾಗೂ ಕೇಂದ್ರೀಯ ಭಾಗಗಳಲ್ಲಿ ಡಿಎಂಕೆ ಬಹುಮತ ಪಡೆಯುವ ಸಾಧ್ಯತೆಯಿದ್ದರೆ, ಉತ್ತರ ಹಾಗೂ ಪಶ್ಚಿಮ ಭಾಗಗಳಲ್ಲಿ ಡಿಎಂಕೆ–ಎಐಎಡಿಎಂಕೆ ನಡುವೆ ಕಠಿಣ ಸ್ಪರ್ಧೆ ಇರಲಿದೆ. ಮುಖಂಡರಾದ ಪನ್ನೀರಸೆಲ್ವಂ, ಪಳನಿಸ್ವಾಮಿ, ಸ್ಟಾಲಿನ್, ಕಮಲಹಾಸನ್ ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಡಿಎಂಕೆ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಹಲವು ಸಮೀಕ್ಷೆಗಳು ಈಗಾಗಲೇ ಅಭಿಪ್ರಾಯಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.