ADVERTISEMENT

ಪಾಕ್ ಪರ ಘೋಷಣೆ ಕೂಗುವವರ ಮತ ಬೇಕಿಲ್ಲ: ಬಿಜೆಪಿ ಸಂಸದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2021, 15:37 IST
Last Updated 29 ಡಿಸೆಂಬರ್ 2021, 15:37 IST
ಸುಬ್ರತ್ ಪಾಠಕ್
ಸುಬ್ರತ್ ಪಾಠಕ್   

ಕನೌಜ್ (ಉ. ಪ್ರದೇಶ): ಭಯೋತ್ಪಾದನೆಗೆ ಬೆಂಬಲ ಸೂಚಿಸುವ ಹಾಗೂ 'ಪಾಕ್ ಜಿಂದಾಬಾದ್' ಘೋಷಣೆಗಳನ್ನು ಕೂಗುವವರ ಮತಗಳು ತಮಗೆ ಬೇಕಿಲ್ಲ ಎಂದು ಬಿಜೆಪಿ ಸಂಸದ ಸುಬ್ರತ್ ಪಾಠಕ್ ಬುಧವಾರ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ಕನೌಜ್‌ನಲ್ಲಿ ಮಾತನಾಡಿದ ಸುಬ್ರತ್ ಪಾಠಕ್, 'ಭಾರತೀಯ ಜನತಾ ಪಕ್ಷವು ಮನೆಗಳನ್ನು ಕಟ್ಟಿಸಿದಾಗ, ನಿಮ್ಮ ಧರ್ಮ ಯಾವುದು ಎಂಬುದನ್ನು ಕೇಳಲಿಲ್ಲ, ಶೌಚಾಲಯವನ್ನು ನಿರ್ಮಿಸಿದಾಗ ಜಾತಿಯಾವುದೆಂದು ಕೇಳಲಿಲ್ಲ, ಬಹುಶಃ 100 ಮನೆ ಅಥವಾ ಶೌಚಾಲಯಗಳನ್ನು ಕಟ್ಟಿಸಿದ್ದರೆ ಅದರಲ್ಲಿ 30 ಮುಸ್ಲಿಮರಿಗಾಗಿ ಕಟ್ಟಿಸಿರುತ್ತೇವೆ' ಎಂದು ಹೇಳಿದರು.

'ಇಷ್ಟಾದರೂ ಬಿಜೆಪಿಗೆ ಮತ ಸಿಗುವುದಿಲ್ಲ. ಏಕೆಂದರೆ ಬಿಜೆಪಿಯು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ್ದೇವೆ. ಕಾಶಿಯಲ್ಲೂ ಭವ್ಯ ಮಂದಿರ ನಿರ್ಮಿಸಿದ್ದೇವೆ. ಇದೇ ಕಾರಣಕ್ಕಾಗಿ ಮತ ಸಿಗುವುದಿಲ್ಲ ಎಂದಾದರೆ ನಾವು ಮಥುರಾದಲ್ಲೂ ಮಂದಿರ ನಿರ್ಮಿಸಲಿದ್ದೇವೆ' ಎಂದು ಹೇಳಿದರು.

ADVERTISEMENT

'ಯಾರು ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೋ, ಪಾಕಿಸ್ತಾನ ಜಿಂದಾಬಾದ್ ಘೋಷಣೆಯನ್ನು ಕೂಗುತ್ತಾರೋ, ಭಾರತದಲ್ಲಿ ಶರಿಯಾ ಕಾನೂನಿನ ಕನಸನ್ನು ಕಾಣುತ್ತಾರೋ ಅಂತವರ ಮತ ಬಿಜೆಪಿಗೆ ಬೇಕಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.