ಮಧುಬನಿ: ಬಿಹಾರದ ಮಧುಬನಿ ಜಿಲ್ಲೆಯಲ್ಲಿ, ನೇಪಾಳಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಡ್ರೋನ್ ಹೋಲುವಂತಹ ಸಾಧನಗಳು ಪತ್ತೆಯಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
‘ಡ್ರೋನ್ ಹೋಲುವಂತಹ, ಹೊಳೆಯುವ ಕೆಲ ನಿಗೂಢ ವಸ್ತುಗಳು ನೇಪಾಳದಿಂದ ಭಾರತದ ವಾಯುಪ್ರದೇಶವನ್ನು ಸೋಮವಾರ ರಾತ್ರಿ ಪ್ರವೇಶಿಸಿವೆ ಎಂದು ಜಿಲ್ಲೆಯ ಜಯನಗರ ಪ್ರದೇಶದ ಕಮಲಾ ಗಡಿ ಹೊರಠಾಣೆಯಲ್ಲಿ (ಬಿಒಪಿ) ನಿಯೋಜನೆಗೊಂಡಿರುವ ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ) ಸಿಬ್ಬಂದಿ ತಿಳಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯೋಗೇಂದ್ರ ಕುಮಾರ್ ಹೇಳಿದ್ದಾರೆ.
ಮೇ 29 ಹಾಗೂ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಪ್ರವಾಸ ಕೈಗೊಂಡಿದ್ದು, ರಾಜ್ಯದಾದ್ಯಂತ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.